Sunday, 24th November 2024

ಪ್ಯಾಕೇಜ್ ಘೋಷಣೆ ಬೆನ್ನಲ್ಲೇ ಷೇರು ಪೇಟೆ ಸಂಚಲನ

ಮುಂಬೈ:

ಕರೋನಾ ವೈರಸ್ ದಾಳಿಯಿಂದ ಅಲ್ಲೋಲ-ಕಲ್ಲೋಲವಾಗಿರುವ ದೇಶದ ಆರ್ಥಿಕತೆಗೆ ಪುಷ್ಟಿಿ ನೀಡಲು ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿ ರು.ಗಳ ಆರ್ಥಿಕ ಪ್ಯಾಾಕೇಜ್ ಘೋಷಿಸಿದ ನಂತರ ಷೇರುಪೇಟೆಯಲ್ಲಿ ಭಾರೀ ಸಂಚಲನ ಕಂಡುಬಂದಿದೆ.

ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕದಲ್ಲಿ ಬುಧವಾರ ಬೆಳಗ್ಗೆೆ 1,400 ಪಾಯಿಂಟ್‌ಗಳ ಜಿಗಿತವಾಗಿದೆ. ಷೇರುಪೇಟೆಯ ಬುಧವಾರ ಆರಂಭಿಕ ವಹಿವಾಟಿನಲ್ಲೇ ಭಾರೀ ಏರಿಕೆ ಗೋಚರಿಸಿದೆ. 30 ಷೇರು ಸೂಚ್ಯಂಕದಲ್ಲಿ 818.68 ಪಾಯಿಂಟ್‌ಗಳು ಅಥವಾ ಶೇ.2.61ರಷ್ಟು ವಹಿವಾಟು ಚೇತರಿಕೆ ಕಂಡುಬಂದು, ಗರಿಷ್ಠ 32,845.48 ತಲುಪಿತು.

ಅದೇ ರೀತಿ ಎನ್‌ಎಸ್‌ಸಿ ನಿಫ್ಟಿಯಲ್ಲಿಯೂ ಏರಿಕೆ ಕಂಡುಬಂದಿದೆ. ಅದು 213.50 ಪಾಯಿಂಟ್ ತಲುಪಿತ್ತು (ಶೇ.2.32 ರಿಂದ 9,410.05) ಇಂದಿನ ಆರಂಭಿಕ ವಹಿವಾಟು ಚೇತರಿಕೆಯಲ್ಲಿ ಐಸಿಐಸಿ ಬ್ಯಾಾಂಕ್ ಗರಿಷ್ಠ ವಹಿವಾಟು ದಾಖಲಿಸಿದೆ. ನಂತರದ ಸ್ಥಾನಗಳಲ್ಲಿ ಎಲ್ ಅಂಡ್ ಟಇ, ಆಕ್ಸಿಸ್ ಬ್ಯಾಾಂಕ್, ಬಜಾಜ್ ಫೈನಾನ್‌ಸ್‌, ಹೀರೋ ಮೋಟೊಕಾರ್ಪ, ಎಂಅಂಡ್ಎಂ, ಆಲ್ಟ್ರಾಟೆಕ್ ಸೀಮೆಂಟ್ ಮತ್ತು ಮಾರುತಿ ಕಂಪನಿಗಳಿವೆ.