Thursday, 19th September 2024

ಶಿವಸೇನೆ ಸೋಲಿಸಿದ ದೇವೇಂದ್ರ ಪವರ್

ನವದೆಹಲಿ: ಮಹಾರಾಷ್ಟ್ರದಲ್ಲಿ ನಡೆದ ಅನಿರೀಕ್ಷಿಿತ ರಾಜಕೀಯ ಬೆಳವಣಿಗೆಯನ್ನು ಕೆದಕುತ್ತ ಹೋದರೆ ಅದು ಕೊನೆಗೆ ಶರದ್ ಪವಾರ್ ಹಾಗೂ ಪ್ರಧಾನಿ ಮೋದಿ ಅವರನ್ನು ತಲುಪುತ್ತಿಿದೆ.
ವಿಧಾನಸಭೆ ಚುನಾವಣೆ ಫಲಿತಾಂಶ ಅಕ್ಟೋೋಬರ್ 24ರಂದು ಬಂದ ಬಳಿಕ ಬಿಜೆಪಿ-ಶಿವಸೇನೆ ನಡುವಿನ ಅಧಿಕಾರ ಹಂಚಿಕೆ ಬಿಕ್ಕಟ್ಟಿಿನಿಂದ ಸರಕಾರ ರಚನೆ ನನೆಗುದಿಗೆ ಬಿದ್ದಿತು. ಏನೇ ಸರ್ಕಸ್ ಮಾಡಿದರೂ ಭಿನ್ನಾಾಭಿಪ್ರಾಾಯ ಬಗೆಹರಿಯಲಿಲ್ಲ. ಅಕ್ಟೋೋಬರ್ 30ರಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೇ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆೆ ಅವರನ್ನು ಭೇಟಿ ಮಾಡಿ ಸಮಸ್ಯೆೆ ಬಗೆಹರಿಸುತ್ತಾಾರೆ ಎಂದು ಹೇಳಲಾಯಿತಾದರೂ ಈ ಸಭೆ ನಡೆಯಲೇ ಇಲ್ಲ. ಶಿವಸೇನೆಯ ಹಠದಿಂದ ಕೊನೆಗೆ ಸರಕಾರ ರಚನೆಯ ಪ್ರಯತ್ನವನ್ನೇ ಬಿಜೆಪಿ ಕೈಬಿಟ್ಟಿಿತು. ಆಗ ಶಿವಸೇನೆ-ಎನ್‌ಸಿಪಿ-ಕಾಂಗ್ರೆೆಸ್ ಪಕ್ಷಗಳು ಒಂದಾಗಿ ಸರಕಾರ ರಚಿಸುವ ಯತ್ನ ಆರಂಭವಾಯಿತು. ಇನ್ನೇನು ಈ ಸಮ್ಮಿಿಶ್ರ ಸರಕಾರ ಆಗಿಯೇ ಹೋಯಿತು ಎನ್ನುವಾಗಲೇ ಈ ಬೆಳವಣಿಗೆ ನಡೆದಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಇದು ಶರದ್ ಪವಾರ್ ಹಾಗೂ ಬಿಜೆಪಿಯ ಗೇಮ್‌ಪ್ಲ್ಯಾಾನ್ ಭಾಗವೇ ಎಂದು ಎಲ್ಲರೂ ಈಗ ತಲೆಕೆಡಿಸಿಕೊಳ್ಳುತ್ತಿಿದ್ದಾಾರೆ. ಆ ರೀತಿಯ ಯೋಚನೆಗೆ ಕಾರಣವಾಗಿದ್ದು ಶರದ್ ಪವಾರ್ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದು. ಎರಡ್ಮೂರು ದಿನಗಳ ಹಿಂದೆ ಅವರು ಹಠಾತ್ತಾಾಗಿ ಮೋದಿಯವರನ್ನು ಭೇಟಿ ಮಾಡಿ ಸುಮಾರು 50 ನಿಮಿಷಗಳ ಕಾಲ ಚರ್ಚೆ ನಡೆಸಿದರು. ರಾಜ್ಯದಲ್ಲಿ ರೈತರ ಸಮಸ್ಯೆೆ ಕುರಿತು ಚರ್ಚೆಗೆ ಭೇಟಿ ಮಾಡಿದ್ದಾಾಗಿ ಶರದ್ ಪವಾರ್ ಹೇಳಿದ್ದರು. ಬಳಿಕ ಶರದ್ ಅವರನ್ನು ರಾಷ್ಟ್ರಪತಿ ಮಾಡಲಾಗುತ್ತದೆ ಎಂಬಂಥ ಸುದ್ದಿಗಳೂ ಹರಿದಾಡಿದವು.
ಈಗ ಮೋದಿ-ಪವಾರ್ ಭೇಟಿಯ ಎಳೆಗಳನ್ನು ಜೋಡಿಸುತ್ತಾಾ ಹೋದರೆ, ಅದು ಮಹಾರಾಷ್ಟ್ರದಲ್ಲಿ ಸರಕಾರ ರಚನೆಯತ್ತ ಬೊಟ್ಟು ಮಾಡುತ್ತದೆ. ಅಮಿತ್ ಶಾ ಸಂಧಾನವೂ ಫಲ ನೀಡದಿರುವಾಗ ಸ್ವತಃ ಪ್ರಧಾನಿಯೇ ರಂಗಪ್ರವೇಶ ಮಾಡಿದರೇ ಎಂಬ ಪ್ರಶ್ನೆೆಗಳು ಹುಟ್ಟಿಿಕೊಂಡಿವೆ. ಇ.ಡಿ ದಾಳಿಯಿಂದ ಕಂಗೆಟ್ಟಿಿದ್ದ ಶರದ್ ಪವಾರ್‌ಗೂ ಪ್ರಧಾನಿ ಜತೆ ರಾಜಿ ಬೇಕಿತ್ತು. ಹೀಗಾಗಿ ಇಬ್ಬರಿಗೂ ಲಾಭದಾಯಕವಾಗುವ ನಿಟ್ಟಿಿನಲ್ಲಿ ಒಪ್ಪಂದವೊಂದು ನಡೆದಿರಬಹುದು ಎಂದು ಹೇಳಲಾಗುತ್ತಿಿದೆ. ಈ ಭೇಟಿಯ ಸಂದರ್ಭದಲ್ಲಿ ಇಂಥದೊಂದು ಡೀಲ್ ನಡೆದರೂ ಸೂಕ್ಷ್ಮ ವಿಷಯವಾಗಿರುವುದರಿಂದ ಅತ್ಯಂತ ರಹಸ್ಯವಾಗಿ ಇರಿಸಲಾಗಿತ್ತು ಎನ್ನಲಾಗಿದೆ.