ದೆಹಲಿ:
ಕರೋನಾದ ಕರಿ ನೆರಳು ಭಾರತೀಯ ಭದ್ರತಾ ಪಡೆಗಳ ಮೇಲೂ ಬೀರಿದೆ. ರಾಜಧಾನಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ನ 15 ಯೋಧರಿಗೆ ಕರೋನಾ ವೈರಸ್ ಸೋಂಕು ದೃಢಪಟ್ಟಿದೆ.
ದೆಹಲಿಯ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್ಪಿಿಎಫ್) ತುಕಡಿಯೊಂದರಲ್ಲಿ ಕರೋನಾ ವೈರಸ್ ಸೋಂಕಿತ ಯೋಧರ ಸಂಖ್ಯೆ 122ಕ್ಕೇರಿರುವುದು ಆತಂಕಕ್ಕೆ ಕಾರಣವಾಗಿರುವಾಗಲೇ ಬಿಎಸ್ ಎಫ್‌ನ 15 ಸೈನಿಕರಿಗೆ ಸೋಂಕು ತಗುಲಿದೆ.
ಸೋಂಕಿತರು 126 ಮತ್ತು 178ನೇ ಬೆಟಾಲಿಯನ್ ಬಿಎಸ್‌ಎಫ್ ಸಿಬ್ಬಂದಿಯಾಗಿದ್ದು, ದೆಹಲಿಯ ಜಾಮ ಮಸೀದಿ ಮತ್ತು ಚಾಂದಿನಿ ಮಹಲ್ ಪ್ರದೇಶದಲ್ಲಿ ಕರೋನಾ ಲಾಕ್ ಡೌನ್ ಕರ್ತವ್ಯ ನಿರ್ವಹಿಸಿದ್ದರು. ಆಗ ಸೋಂಕು ತಗುಲಿದೆ.
ಇವೆರಲ್ಲರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಬಿಎಸ್‌ಎಫ್ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ದೇಶದ ಅತಿದೊಡ್ಡ ಅರೆಸೇನಾ ಪಡೆಯಲ್ಲಿನ ಒಟ್ಟು 122 ಯೋಧರಿಗೆ ಕರೋನಾ ಪಾಸಿಟಿವ್ ದೃಢಪಟ್ಟಿತ್ತು.
ದೆಹಲಿಯ ಮಯೂರ್ ವಿಹಾರ್ 3ನೇ ಹಂತದಲ್ಲಿರುವ ಸಿಆಪಿರ್‌ಎಫ್ನ 31ನೆ ಬೆಟಾಲಿಯನ್ನಲ್ಲಿನ 122 ಯೋದರಿಗೆ ಸೋಂಕು ತಗುಲಿದ್ದು, ಅವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಿಆರ್ಪಿಿಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಟಾಲಿಯನ್‌ನ 12 ಯೋಧರಿಗೆ ಮತ್ತೆ ಸೋಂಕು ತಗುಲಿದ್ದು, ಈಗ ಸಾಂಕ್ರಾಮಿಕ ರೋಗ ಪೀಡಿತರ ಸಂಖ್ಯೆ 122ಕ್ಕೇರಿದೆ. ಕಳೆದ ವಾರ ಈ ಬೆಟಾಲಿಯನ್‌ನ 55 ವರ್ಷದ ಸಬ್ ಇನ್ಸ್ಪೆೆಕ್ಟರ್ ಅಸುನೀಗಿದ್ದರು. ಇತ್ತೀಚಗೆ ಮುಂಬೈನ ಭಾರತೀಯ ನೌಕಾಪಡೆಯ 26 ನೌಕಾ ಸಿಬ್ಬಂದಿಗೂ ಕರೋನಾ ಸೋಂಕು ದೃಢಪಟ್ಟಿರುವುದನ್ನು ತಿಳಿಸಿದ್ದಾರೆ.