ದೆಹಲಿ:
ಕರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಆರಂಭವಾದ ಮಿಷನ್ ಸಾಗರ್ ಯತ್ನವಾಗಿ 580 ಟನ್ ಆಹಾರ ಸಾಮಾಗ್ರಿಗಳನ್ನು ಹೊತ್ತ ಐಎನ್‌ಎಸ್ ಕೇಸರಿ ಹಡಗು ಮಾಲ್ಡೀವ್‌ಸ್ ತಲುಪಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
ಕರೋನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು, ಕಳೆದ 12 ರಂದು ಆಹಾರ ಸಾಮಾಗ್ರಿಗಳನ್ನು ಹಸ್ತಾಾಂತರಿಸಲಾಗಿದೆ ಎಂದೂ ನೌಕಾಪಡೆ ತಿಳಿಸಿದೆ. ಈ ಸಂದರ್ಭದಲ್ಲಿ ಮಾಲ್ಡೀವ್‌ಸ್‌ನ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್, ರಕ್ಷಣಾ ಸಚಿವ ಮರಿಯಾ ಅಹ್ಮದ್ ದಿದಿ ಮತ್ತು ಭಾರತದ ಹೈಕಮಿಷನರ್ ಸುಂಜಯ್ ಸುಧೀರ್ ಮೊದಲಾದವರು ಇದ್ದರು.