ದೆಹಲಿ:
ಜಮ್ಮು ಕಾಶ್ಮೀರದಲ್ಲಿ ಹಂದ್ವಾರದಲ್ಲಿ ಭಾನುವಾರ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿ ಪ್ರಧಾನಿ ನರೇಂದ್ರಮೋದಿ ಶ್ರದ್ಧಾಾಂಜಲಿ ಸಲ್ಲಿಸಿದ್ದು, ಹುತಾತ್ಮ ಯೋಧರ ಪರಾಕ್ರಮ ಮತ್ತು ತ್ಯಾಗ ಎಂದಿಗೂ ಮರೆಯಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಹಂದ್ವಾರದಲ್ಲಿ ಹುತಾತ್ಮರಾದ ಧೈರ್ಯವಂತ ಯೋಧರು ಮತ್ತು ಭದ್ರತಾ ಸಿಬ್ಬಂದಿಗೆ ಗೌರವ ನಮನಗಳು. ಅವರ ತ್ಯಾಗ ಮತ್ತು ಶೌರ್ಯ ಎಂದಿಗೂ ಮರೆಯಲಾಗದು ಎಂದು ಪ್ರಧಾನಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಹುತಾತ್ಮರ ಯೋಧರು ಸಮರ್ಪಣಾ ಮನೋಭಾವದಿಂದ ನಾಗರಿಕರ ರಕ್ಷಣೆಗೆ ಅವಿರತವಾಗಿ ಶ್ರಮಿಸಿದ್ದಾರೆ ಎಂದು ಪ್ರಧಾನಿಯವರು ಹುತಾತ್ಮರ ಕುಟುಂಬಗಳಿಗೆ ಹಾಗೂ ಅವರ ಸ್ನೇಹಿತರಿಗೆ ಸಂತ್ವಾನ ಹೇಳಿದ್ದಾರೆ.
ಕುಪ್ಪಾರ ಜಿಲ್ಲೆಯ ಹಂದ್ವಾರದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಲ್ ಮತ್ತು ಮೇಜರ್‌ವೊಬ್ಬರು ಸೇರಿದಂತೆ ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಉಗ್ರರು ಅಡಗಿರುವ ನಿರ್ದಿಷ್ಟ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಹಂದ್ವಾರದ ಚಾಂಚ್‌ಮುಲ್ಲಾನಲ್ಲಿ ಶನಿವಾರ ಸಂಜೆ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.