Saturday, 14th December 2024

ವಲಸೆ ಕಾರ್ಮಿಕರಿಂದ ಹಣ ಪಡೆಯುತ್ತಿಲ್ಲ: ರೈಲ್ವೆ ಇಲಾಖೆ

ದೆಹಲಿ:

ಕಾರ್ಮಿಕರಿಗೆ ವಿಶೇಷ ರೈಲುಗಳ ಸಂಚಾರಕ್ಕೆ ನಾವು ನಿಗದಿತ ದರ ವಸೂಲಿ ಮಾಡುತ್ತಿದ್ದೇವೆ. ಒಂದು ರೈಲು ಸಂಚಾರಕ್ಕೆ ತಗಲುವ ವೆಚ್ಚದ ಶೇ.15ರಷ್ಟನ್ನು ಮಾತ್ರ ರಾಜ್ಯ ಸರಕಾರ ನೀಡಬೇಕು ಎಂದು ರೈಲ್ವೆ ಇಲಾಖೆ ಸ್ಪಷ್ಟಣೆ ನೀಡಿದೆ.

ಆದರೆ ಕಾರ್ಮಿಕರಿಂದ ಪ್ರಯಾಣದ ಹಣ ಪಡೆಯುತ್ತಿಲ್ಲ ಎಂದು ವಿವರಣೆ ನೀಡಿದೆ. ವಲಸೆ ಕಾರ್ಮಿಕರನ್ನು ತಮ್ಮ ತವರು ರಾಜ್ಯಕ್ಕೆ ಕಳಿಸಲು ಭಾರತೀಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸುತ್ತಿದ್ದು ದರದ ಬಗ್ಗೆ ಭಾರೀ ಚರ್ಚೆ ವಿವಾದ ನಡೆಯುತ್ತಿದೆ.
ಕಾರ್ಮಿಕರನ್ನು ತವರು ರಾಜ್ಯಕ್ಕೆ ಕಳಿಸಲು ರಾಜ್ಯಗಳು ರೈಲಿಗಾಗಿ ಬೇಡಿಕೆ ಸಲ್ಲಿಸಿದರೆ ವಿಶೇಷ ರೈಲನ್ನು ನೀಡಲಾಗುತ್ತಿದೆ. ಇದು ಉಚಿತ ಸೇವೆಯಯಲ್ಲ ಇದಕ್ಕೆ ರಾಜ್ಯ ಸರಕಾರ ಹಣ ಪಾವತಿ ಮಾಡಬೇಕು ಎಂದು ತಿಳಿಸಿದೆ.