Thursday, 19th September 2024

74.87 ಲಕ್ಷ ಮೌಲ್ಯದ 1.5 ಕೆಜಿ ತೂಕದ ಚಿನ್ನದ ಪೇಸ್ಟ್ ಕಳ್ಳಸಾಗಣೆ: ಮಹಿಳೆ ಬಂಧನ

ಹೈದರಾಬಾದ್: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರು ಕಳ್ಳಸಾಗಣೆ ಮಾಡುತ್ತಿದ್ದ ಸುಮಾರು 74.87 ಲಕ್ಷ ಮೌಲ್ಯದ 1.5 ಕೆಜಿಗೂ ತೂಕದ ಚಿನ್ನದ ಪೇಸ್ಟ್ ಅನ್ನು ವಶಪಡಿಸಿಕೊಳ್ಳಲಾಗಿದೆ.

1593 ಗ್ರಾಂ ತೂಕದ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಬಚ್ಚಿಟ್ಟು ವಿಮಾನವಿಳಿದು ಹೊರಬರುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬ ರನ್ನು ತಪಾಸಣೆಗೊಳಪಡಿಸಿದಾಗ ಅನುಮಾನಾಸ್ಪದ ವಸ್ತು ಕಂಡುಬಂದಿದೆ. ತಕ್ಷಣ ಕಸ್ಟಮ್ಸ್ ಮಹಿಳಾ ಅಧಿಕಾರಿಗಳು ಚಿನ್ನವಿರುವುದು ಪತ್ತೆಯಾಗಿದೆ.

Leave a Reply

Your email address will not be published. Required fields are marked *