Sunday, 15th December 2024

ನೂರು ಉದ್ಯೋಗಿಗಳಿಗೆ ಮಾರುತಿ ಸುಜುಕಿ ಕಾರು ಉಡುಗೊರೆ

ಚೆನ್ನೈ: ಐಟಿ ಕಂಪನಿಯೊಂದು, ಕೆಲಸಗಾರರ ಬೆಂಬಲ ಮತ್ತು ಸರಿಸಾಟಿ ಇಲ್ಲದ ಪರಿಶ್ರಮಕ್ಕಾಗಿ ನೂರು ಮಾರುತಿ ಸುಜುಕಿ ಕಾರುಗಳನ್ನು ಉಡುಗೊರೆಯಾಗಿ ನೀಡುತ್ತಿರುವುದಾಗಿ ಹೇಳಿದೆ.

Ideas2IT ಕಂಪನಿಯು ತನ್ನ ನೂರು ಉದ್ಯೋಗಿಗಳಿಗೆ ಮಾರುತಿ ಸುಜುಕಿ ಕಾರನ್ನು ಕೊಡುಗೆಯಾಗಿ ನೀಡಿದೆ. 500 ಜನ ಕೆಲಸಗಾರರು ಇರುವ ಈ ಕಂಪನಿ ಯಲ್ಲಿ ಹತ್ತು ವರ್ಷದಿಂದ ಅವಿರತವಾಗಿ ಶ್ರಮಿಸಿರುವ ನೂರು ಜನರಿಗೆ ಕಾರನ್ನು ಕೊಡುಗೆಯಾಗಿ ನೀಡಲಾಗಿದೆ.

ಕೆಲಸಗಾರರ ಪರಿಶ್ರಮದಿಂದ ಬಂದಿರುವ ಲಾಭದಿಂದ ಈ ಕೊಡುಗೆ ನೀಡಲಾಗಿದೆ ಎಂದು ಮಾರ್ಕೆ ಟಿಂಗ್ ಹೆಡ್ ಹರಿ ಸುಬ್ರಮಣ್ಯನ್ ಹಾಗೂ ಕಂಪನಿಯ ಸ್ಥಾಪಕ ಹಾಗೂ ಚೇರ್ಮನ್ ಮುರಳಿ ವಿವೇಕಾ ನಂದನ್ ತಿಳಿಸಿದ್ದಾರೆ.

ಎಂಟು ವರ್ಷದ ಹಿಂದೆ ಭರವಸೆ ನೀಡಿದಂತೆ ಹತ್ತು ವರ್ಷ ಪರಿಶ್ರಮ ಪಟ್ಟವರಿಗೆ ಕಂಪನಿಯ ಲಾಭದಿಂದ ಕಾರ್ ಗಳನ್ನು ನೀಡಲಾಗಿದೆ.