Friday, 22nd November 2024

ಸಿಎಪಿಎಫ್ ಯೋಧರಿಗೆ ವರ್ಷಕ್ಕೆ 100 ದಿನ ರಜೆ: ಕೇಂದ್ರ ಗೃಹ ಇಲಾಖೆ

ನವದೆಹಲಿ: ಕೇಂದ್ರೀಯ ಸಶಸ್ತ್ರ ಸೇನಾ ಪಡೆಗಳ ಯೋಧರು ವರ್ಷದಲ್ಲಿ ತಮ್ಮ ಕುಟುಂಬ ದೊಂದಿಗೆ ಕನಿಷ್ಠ 100 ದಿನಗಳನ್ನು ಕಳೆಯುವಂತೆ ಮಾಡುವ ಹೊಸ ಚಿಂತನೆಯನ್ನು ಕೇಂದ್ರ ಗೃಹ ಇಲಾಖೆ ಜಾರಿಗೆ ತರಲು ನಿರ್ಧರಿಸಿದೆ.

ಯೋಧರಿಗೆ ವಾರ್ಷಿಕ 100 ರಜೆಗಳನ್ನು ನೀಡುವ ಪ್ರಸ್ತಾವನೆ ಯನ್ನು ಸಿದ್ಧಪಡಿಸಿ ಅದನ್ನು ಕೇಂದ್ರದ ಒಪ್ಪಿಗೆ ಪಡೆದು ಜಾರಿ ಗೊಳಿಸಲು ತೀರ್ಮಾನಿಸಲಾಗಿದೆ.

ಈ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಸಶಸ್ತ್ರ ಸೇನಾ ಪಡೆಗಳ ಅಧೀನದಲ್ಲಿ ಬರುವ ಎಲ್ಲಾ ಪಡೆಗಳಿಗೂ ಅನ್ವಯಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಈಗಿರುವ ನಿಯಮ ಗಳಲ್ಲಿ ಬದಲಾವಣೆ ತರಲು ತೀರ್ಮಾನಿಸಲಾಗಿದೆ.

ಹೊಸ ಪ್ರಸ್ತಾವನೆ ಸಿದ್ಧಪಡಿಸುವ ಸಲುವಾಗಿ ಈಗಾಗಲೇ ಹಲವಾರು ಸುತ್ತಿನ ಸಭೆಗಳು ನಡೆದಿವೆ. ಈ ಸೌಲಭ್ಯ ಜಾರಿಗೊಳಿಸಲು ಇರುವ ಆಡಳಿತಾತ್ಮಕ ಅಡಚಣೆಗಳನ್ನು ನಿರ್ಮೂ ಲನೆ ಮಾಡುವ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ. ಸಿಎಪಿಎಫ್ ನ ನಾನಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 10 ಲಕ್ಷ ಯೋಧರ ಮೇಲಿರುವ ದೈನಂದಿನ ಕರ್ತವ್ಯದ ಒತ್ತಡವನ್ನು ಇಳಿಸಲು ನಿರ್ಧರಿಸಲಾಗಿದೆ.