Sunday, 15th December 2024

ನಾಳೆ ನೂರು ರೂಪಾಯಿ ಮುಖಬೆಲೆಯ ನಾಣ್ಯ ಲೋಕಾರ್ಪಣೆ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ನೂರು ರೂಪಾಯಿ ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಗ್ವಾಲಿಯರ್​ನ ರಾಜಮಾತೆಯ ಸ್ಮರಣಾರ್ಥ ಈ ನಾಣ್ಯ ಲೋಕಾರ್ಪಣೆ ಆಗಲಿದೆ.

ಗ್ವಾಲಿಯರ್​ನ ರಾಜಮಾತೆ ಎಂದೇ ಖ್ಯಾತರಾಗಿರುವ ವಿಜಯರಾಜೇ ಸಿಂಧ್ಯಾ ಅವರ ಜನ್ಮಶತಮಾನೋತ್ಸವ ಸ್ಮರಣಾರ್ಥ ನೂರು ರೂಪಾಯಿಯ ಸ್ಮಾರಕ ನಾಣ್ಯವನ್ನು ಪ್ರಧಾನಿ ಬಿಡುಗಡೆ ಮಾಡಲಿರುವರು.

ಪ್ರಧಾನಿ ಮೋದಿ ಅವರ ಜತೆಗೆ ವಿಜಯರಾಜೇ ಸಿಂಧ್ಯಾ ಅವರ ಕುಟುಂಬಸ್ಥರು, ಕೇಂದ್ರ ಹಣಕಾಸು ಸಚಿವಾಲಯದ ಮುಖ್ಯಸ್ಥರು ಹಾಗೂ ಇತರ ಗಣ್ಯರು ವರ್ಚುವಲ್​ ಪ್ಲ್ಯಾಟ್​ಫಾರ್ಮ್​ ಮೂಲಕ ಈ ಕಾರ್ಯಕ್ರಮದಲ್ಲಿ ಜತೆಗೂಡಲಿರುವರು.