ಥಾಣೆ: ಮಹಾರಾಷ್ಟ್ರ ರಾಜ್ಯದ ಥಾಣೆ ಜಿಲ್ಲೆಯ ಭಿವಂಡಿಯಲ್ಲಿ 1 ಸಾವಿರ ಜಿಲೆಟಿನ್ ಸ್ಟಿಕ್ಗಳು ಹಾಗೂ ಡಿಟೋನೇಟರ್ಗಳೊಂದಿಗೆ ಮೂವರನ್ನು ಬಂಧಿಸಲಾಗಿದೆ.
ನಾಡಿ ನಾಕಾದಲ್ಲಿ ಸುಳಿವಿನ ಮೇರೆಗೆ ಕಾರನ್ನು ತಡೆದು, ನೆರೆಯ ಪಾಲ್ಘರ್ ಜಿಲ್ಲೆಯ ವಿಕ್ರಮಗಡ ನಿವಾಸಿಗಳಾದ ಅಲ್ಪೇಶ್ ಅಲಿಯಾಸ್ ಬಲ್ಯ ಹಿರಾಜಿ ಪಾಟೀಲ್ (34), ಪಂಕಜ್ ಅಚ್ಚೇಲಾಲ್ ಚೌಹಾಣ್ (23) ಮತ್ತು ಸಮೀರ್ ಅಲಿಯಾಸ್ ಸಮ್ಯ ರಾಮಚಂದ್ರ ವೇದ್ಗಾ (27) ಅವರಿಂದ ಭಾರೀ ಪ್ರಮಾಣದ ಜಿಲೆಟಿನ್ ಸ್ಟಿಕ್ ಹಾಗೂ ಡಿಟೊನೇಟರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.