Wednesday, 11th December 2024

ವಿಕಲಚೇತನ ಮಗಳ ಅತ್ಯಾಚಾರ: ತಂದೆಗೆ 107 ವರ್ಷ ಜೈಲು ಶಿಕ್ಷೆ

ಕೇರಳ: ವಿಕಲಚೇತನ ಮಗಳ ಮೇಲೆ ತಂದೆಯೇ ಅತ್ಯಾಚಾರ ಎಸಗಿದ್ದು, 107 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.

ಕೇರಳದ ಪೊಕ್ಸೋ ನ್ಯಾಯಾಲಯ 107 ವರ್ಷಗಳ ಕಠಿಣ ಜೈಲುಶಿಕ್ಷೆ, ನಾಲ್ಕು ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ. ದಂಡದ ಮೊತ್ತ ಕಟ್ಟಲು ವಿಫಲವಾದರೆ ಐದು ವರ್ಷಗಳ ಹೆಚ್ಚುವರಿ ಜೈಲು ಶಿಕ್ಷೆ ನೀಡಲು ಸೂಚಿಸಲಾಗಿದೆ.

ಕೇರಳದ ಪತ್ತನಂತಿಟ್ಟ ಜಿಲ್ಲೆಯ ಗ್ರಾಮವೊಂದರಲ್ಲಿ ಬಾಲಕಿ ಹಾಗೂ ತಂದೆ ವಾಸವಿದ್ದರು. ಪತ್ನಿ ಮನೆ ಬಿಟ್ಟು ಹೋಗಿದ್ದಳು. ಪತ್ನಿ ಇಲ್ಲ ಎಂಬುದನ್ನೇ ನೆಪವಾಗಿಟ್ಟುಕೊಂಡು ಕ್ರೂರಿ ತಂದೆ ತನ್ನ ಮಗಳ ಮೇಲೆಯೇ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ.

ಮಗಳು ಒಂದು ಬಾರಿ ತಪ್ಪಿಸಿಕೊಂಡು ಹೋಗಿದ್ದು, ಶಾಲೆಯಲ್ಲಿ ಶಿಕ್ಷಕರ ಬಳಿ ಇದನ್ನೆಲ್ಲಾ ಹೇಳಿಕೊಂಡಿದ್ದಾಳೆ ಎನ್ನಲಾಗಿದೆ. ಶಿಕ್ಷಕರು ಚೈಲ್ಡ್ ಲೈನ್ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದು, 2020ರಲ್ಲಿ ಪ್ರಕರಣ ದಾಖಲಾಗಿತ್ತು.