ಇಂದು ಹನುಮ ಜಯಂತಿಯ ವಿಶೇಷ ಸಂದರ್ಭವನ್ನು ಆಚರಿಸುತ್ತಿದ್ದೇವೆ. ಮೊರ್ಬಿಯಲ್ಲಿ 108 ಅಡಿ ಎತ್ತರದ ಹನುಮಾನ್ ಜೀ ಪ್ರತಿಮೆ ಉದ್ಘಾಟನೆ ನಡೆಯಲಿದೆ. ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಈ ಕಾರ್ಯಕ್ರಮದ ಭಾಗವಾಗಲು ಅವಕಾಶ ಸಿಕ್ಕಿರುವುದಕ್ಕೆ ನನಗೆ ಗೌರವವಿದೆ’ ಎಂದು ದೇವರ ಪ್ರತಿಮೆಯ ಚಿತ್ರಗಳೊಂದಿಗೆ ಟ್ವೀಟ್ ಮಾಡಿದ್ದಾರೆ.
‘ಹನುಮಂಜಿ ಚಾರ್ ಧಾಮ್’ ಯೋಜನೆ ಭಾಗವಾಗಿ ದೇಶಾದ್ಯಂತ ನಾಲ್ಕು ದಿಕ್ಕುಗಳಲ್ಲಿ ನಿರ್ಮಾಣವಾಗುತ್ತಿರುವ ನಾಲ್ಕು ಪ್ರತಿಮೆಗಳಲ್ಲಿ ಈ ಪ್ರತಿಮೆ ಎರಡನೆಯದು ಎಂದು ಪ್ರಧಾನಿ ಕಾರ್ಯಾಲಯ ಶುಕ್ರವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಸರಣಿಯ ಮೊದಲ ಪ್ರತಿಮೆಯನ್ನು ಉತ್ತರದಲ್ಲಿ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ 2010 ರಲ್ಲಿ ಸ್ಥಾಪಿಸಲಾಯಿತು. ಮೂರನೇ ಪ್ರತಿಮೆಯ ಕೆಲಸವನ್ನು ದಕ್ಷಿಣದಲ್ಲಿ ರಾಮೇಶ್ವರಂನಲ್ಲಿ ಪ್ರಾರಂಭಿಸಲಾಗಿದೆ.