ನವದೆಹಲಿ: ಲೋಕಸಭಾ ಚುನಾವಣೆ (2024) ಯಲ್ಲಿ ಆಮ್ ಆದ್ಮಿ ಪಕ್ಷ ಗೆದ್ದರೆ ಹತ್ತು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.
‘ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾನಿಂದು 10 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೇನೆ. ದೇಶದಲ್ಲಿ ಇನ್ನೂ ಹಲವು ಹಂತಗಳ ಮತದಾನ ಬಾಕಿ ಇದೆ. ಹಾಗಂತ, ಇಂಡಿಯಾ ಒಕ್ಕೂಟದ ಪಕ್ಷಗಳ ಜತೆ ಚರ್ಚಿಸಿ ಗ್ಯಾರಂಟಿಗಳನ್ನು ಘೋಷಣೆ ಮಾಡಿಲ್ಲ. ಇಂಡಿಯಾ ಒಕ್ಕೂಟವು ದೇಶದಲ್ಲಿ ಅಧಿಕಾರಕ್ಕೆ ಬಂದರೆ ಈ 10 ಗ್ಯಾರಂಟಿಗಳನ್ನು ಜಾರಿಗೆ ತರಲಾಗುವುದು’ ಎಂದು ಹೇಳಿದರು.
2. ಅಗ್ನಿವೀರ ಯೋಜನೆಯನ್ನು ರದ್ದುಗೊಳಿಸಿ, ಸೇನೆಯನ್ನು ಇನ್ನಷ್ಟು ಬಲಪಡಿಸುವುದು
3. ದೇಶಾದ್ಯಂತ ಮೊಹಲ್ಲಾ ಕ್ಲಿನಿಕ್‌ಗಳನ್ನು ಸ್ಥಾಪಿಸಿ, ಉಚಿತವಾಗಿ ಚಿಕಿತ್ಸೆ ನೀಡಲಾಗುವುದು.
4. ಚೀನಾದ ಹಿಡಿತದಲ್ಲಿರುವ ಭಾರತದ ಜಾಗವನ್ನು ವಾಪಸ್ ಪಡೆಯುವುದು.
5. ಕೇಂದ್ರ ಹಾಗೂ ರಾಜ್ಯಗಳ ಸಹಕಾರದೊಂದಿಗೆ 5 ಲಕ್ಷ ಕೋಟಿ ರೂ. ವೆಚ್ಚದಲ್ಲಿ ದೇಶಾದ್ಯಂತ ಶಾಲೆ ನಿರ್ಮಿಸಿ, ಬಡವರಿಗೆ ಶಿಕ್ಷಣ ನೀಡುವುದು
6. ದೆಹಲಿಗೆ ರಾಜ್ಯ ಸ್ಥಾನಮಾನ ನೀಡುವ ಮೂಲಕ ಏಳಿಗೆಗೆ ಇನ್ನಷ್ಟು ಶ್ರಮಿಸುವುದು
7. ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಖಾತರಿ ನೀಡುವುದು
8. ನಿರುದ್ಯೋಗ
9. ಭ್ರಷ್ಟಾಚಾರ ಕೊನೆಗೊಳಿಸುವುದು
10. ಉದ್ಯಮಿಗಳಿಗಾಗಿ ಜಿಎಸ್‌ಟಿಯನ್ನು ಸರಳೀಕರಿಸಲಾಗುವುದು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕರೊಂದಿಗೆ ಸಭೆ ನಡೆಸಿದರು. ಜೂನ್ 1 ರವರೆಗೆ ಮಧ್ಯಂತರ ಜಾಮೀನು ನೀಡಿದ ಅವರು ತಿಹಾರ್ ಜೈಲಿನಿಂದ ಹೊರ ಬಂದ ನಂತರ ಶಾಸಕರೊಂದಿಗಿನ ಅವರ ಮೊದಲ ಸಭೆ ಇದಾಗಿದೆ.