Monday, 28th October 2024

ರಾಮ ಮಂದಿರ ನಿರ್ಮಾಣಕ್ಕೆ ₹1,100 ಕೋಟಿ ವೆಚ್ಚ

ಮುಂಬೈ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಮಾರು ಮೂರು ವರ್ಷಗಳು ಹಾಗೂ ಅಂದಾಜು ರೂಪಾಯಿ 1,100 ಕೋಟಿಗೂ ಹೆಚ್ಚು ವೆಚ್ಚವಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

‘ಮುಖ್ಯ ದೇವಾಲಯ ನಿರ್ಮಾಣಕ್ಕೆ ರೂಪಾಯಿ  300- 400 ಕೋಟಿ ವೆಚ್ಚವಾಗಲಿದೆ. ಸಂಪೂರ್ಣ 70 ಎಕರೆ ಜಮೀನಿನ ಅಭಿವೃದ್ಧಿಗೆ ರೂಪಾಯಿ 1,100 ಕೋಟಿ ಬೇಕಾಗಬಹುದು’ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್ ಮಾಹಿತಿ ನೀಡಿದರು.

ಮಂದಿರ ನಿರ್ಮಾಣ ಯೋಜನೆಯ ತಜ್ಞರೊಂದಿಗೆ ಮಾತುಕತೆ ನಡೆಸಿದ ಬಳಿಕ ಸಂಪೂರ್ಣ ವೆಚ್ಚವನ್ನು ಅಂದಾ ಜಿಸಲಾಗಿದೆ’ ಎಂದು ಹೇಳಿದರು.

ಕಾರ್ಪೊರೇಟ್‌ ಕಂಪನಿಗಳು ಮಂದಿರ ನಿರ್ಮಿಸಲು ದೇಣಿಗೆ ನೀಡುವುದಾಗಿ ಹೇಳಿವೆ. ಇದಕ್ಕೂ ಮುನ್ನ ಕಾರ್ಪೊ ರೇಟ್‌ ಕಂಪನಿ ಗಳು, ರಾಮ ಮಂದಿರದ ವಿನ್ಯಾಸ ನೀಡಿದರೆ, ತಾವೇ ನಿರ್ಮಿಸಿ ಕೊಡುವುದಾಗಿ ಹೇಳಿದ್ದವು. ಆದರೆ ಅವರ ಮನವಿಯನ್ನು ವಿನಮ್ರ ವಾಗಿ ನಿರಾಕರಿಸಿದೆವು’ ಎಂದು ತಿಳಿಸಿದರು.

ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸುವ ಮೂಲಕ ಬಿಜೆಪಿಯು 2024ರ ಲೋಕಸಭಾ ಚುನಾವಣೆಯ ಪ್ರಚಾರ ಮಾಡುತ್ತಿದೆ ಎಂಬ ದೂರುಗಳು ಕೇಳಿ ಬಂದಿವೆ.

ರಾಮ ಮಂದಿರ ನಿರ್ಮಾಣಕ್ಕಾಗಿ 6.5 ಲಕ್ಷ ಗ್ರಾಮಗಳು ಮತ್ತು 15 ಕೋಟಿ ಮನೆಗಳಿಂದ ದೇಣಿಗೆ ಸಂಗ್ರಹಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.