Friday, 20th September 2024

ಹಿಂಸಾತ್ಮಕ ವರ್ತನೆ: 12 ವಿಪಕ್ಷ ಸಂಸದರ ಅಮಾನತು

#Rajyasabha

ನವದೆಹಲಿ: ಮುಂಗಾರು ಅಧಿವೇಶನದಲ್ಲಿ ಹಿಂಸಾತ್ಮಕ ವರ್ತನೆ ತೋರಿದ ಕಾರಣಕ್ಕೆ 12 ವಿಪಕ್ಷ ಸಂಸದರನ್ನು ಸಂಸತ್ತಿನ ಚಳಿಗಾಲದ ಅಧಿವೇಶನದುದ್ದಕ್ಕೂ ಅಮಾನತು ಗೊಳಿಸಲಾಗಿದೆ.

ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ ಹಾಗೂ ಅನಿಲ್ ದೇಸಾಯಿ, ತೃಣಮೂಲ ಕಾಂಗ್ರೆಸ್‌ನ ಡೋಲಾ ಸೇನ್ ಮತ್ತು ಶಾಂತಾ ಛೆಟ್ರಿ, ಸಿಪಿಎಂನ ಎಲಮರಮ್ ಕರೀಂ ಹಾಗೂ ಆರು ಕಾಂಗ್ರೆಸ್ ನಾಯಕರನ್ನು ಅಮಾನತು ಮಾಡಲಾಗಿದೆ.

ಮಾನ್ಸೂನ್ ಅಧಿವೇಶನದ ಕೊನೆಯ ದಿನ ಅವರು “ಕಂಡು ಕೇಳರಿಯದ ದುರ್ನಡತೆ, ಅವಹೇಳನಕಾರಿ, ಹಿಂಸಾತ್ಮಕ ಹಾಗೂ ಅಶಿಸ್ತಿನ ನಡವಳಿಕೆ ಮತ್ತು ಭದ್ರತಾ ಸಿಬ್ಬಂದಿಯ ಮೇಲೆ ಉದ್ದೇಶಪೂರ್ವಕ ದಾಳಿಯ” ಮೂಲಕ ಸದನದ ಕಾರ್ಯ ಕಲಾಪಕ್ಕೆ ಸ್ವಇಚ್ಛೆಯಿಂದ ಅಡ್ಡಿಪಡಿಸಿದ್ದಾರೆ ಎಂದು ಟಿಪ್ಪಣಿಯಲ್ಲಿ ತಿಳಿಸಲಾಗಿದೆ.