Friday, 22nd November 2024

ಕೋವಿಡ್‌ ಬ್ರೇಕಿಂಗ್: 12,885 ಹೊಸ ಪ್ರಕರಣ ದೃಢ

#covid

ನವದೆಹಲಿ: ಗುರುವಾರ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಕೋವಿಡ್‌ನ 12,885 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 3,43,21,025ಕ್ಕೇರಿದಂತಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಸತತ 27ನೇ ದಿನವೂ ಹೊಸ ಪ್ರಕರಣಗಳ ಸಂಖ್ಯೆ 20ಸಾವಿರಕ್ಕಿಂತ ಕಡಿಮೆ ವರದಿಯಾಗುತ್ತಿರುವುದು ಕಂಡುಬಂದಿದೆ. ಇದೇ ಅವಧಿಯಲ್ಲಿ 461 ಜನರು ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ.

1,48,579 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಕೋವಿಡ್‌ ಪ್ರಕರಣಗಳ ಶೇ 0.43ರಷ್ಟಿವೆ. ಇವು ಕಳೆದ ವರ್ಷ ಮಾರ್ಚ್‌ ನಂತರ ವರದಿಯಾದ ಅತ್ಯಂತ ಕಡಿಮೆ ಸಂಖ್ಯೆಯ ಸಕ್ರಿಯ ಪ್ರಕರಣಗಳಾಗಿವೆ.

ಈ ವರೆಗೆ ಕೋವಿಡ್‌ ಲಸಿಕೆಯ 107.63 ಡೋಸ್‌ಗಳನ್ನು ನೀಡಲಾಗಿದೆ.