Thursday, 12th December 2024

ಬಾರ್ಕ್‌ ಸಿಇಓಗೆ 14 ದಿನಗಳ ನ್ಯಾಯಾಂಗ ಬಂಧನ

ಮುಂಬೈ: ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್ಸ್‌ (ಟಿಆರ್‌ಪಿ) ಹಗರಣದಲ್ಲಿ ಬಂಧನದಲ್ಲಿರುವ ಬಾರ್ಕ್‌ ಸಂಸ್ಥೆಯ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾರ್ಥೊ ದಾಸ್‌ಗುಪ್ತಾರನ್ನು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಕಸ್ಟಡಿಗೆ ಬುಧವಾರ ನೀಡಿದೆ.

ಪೊಲೀಸ್‌ ಕಸ್ಟಡಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೇ ವೇಳೆ ದಾಸ್‌ಗುಪ್ತಾ ಜಾಮೀನು ಅರ್ಜಿ ಸಲ್ಲಿಸಿದರು. ‘ದಾಸ್‌ಗುಪ್ತಾ ಅವರ ಮೇಲೆ ನಿರ್ದೇಶಕರ ಮಂಡಳಿ, ಶಿಸ್ತು ಸಮಿತಿಯಿದ್ದು, ಇವರು ರೇಟಿಂಗ್‌ ವ್ಯವಸ್ಥೆ ತಿರುಚಿರಲು ಸಾಧ್ಯವಿಲ್ಲ’ ಎಂದು ಅವರ ಪರ ವಕೀಲ ಕಮಲೇಶ್‌ ಘುಮ್ರೆ ಹೇಳಿದರು. ಜ.1ರಂದು ಈ ಅರ್ಜಿಯ ವಿಚಾರಣೆ ನಡೆಯಲಿದೆ.