Saturday, 14th December 2024

ಮಣಿಪುರದಲ್ಲಿ ಭೂಕುಸಿತ: ಮೃತರ ಸಂಖ್ಯೆ 14ಕ್ಕೆ ಏರಿಕೆ

ನೋನಿ: ಮಣಿಪುರದಲ್ಲಿ ಉಂಟಾಗಿರುವ ಭೀಕರ ಭೂಕುಸಿತದಲ್ಲಿ ಮೃತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

ಸ್ಥಳೀಯ ಆಡಳಿತದ ಪ್ರಕಾರ, ಗ್ರಾಮಸ್ಥರು, ಸೇನೆ ಮತ್ತು ರೈಲ್ವೆ ಸಿಬ್ಬಂದಿ ಸೇರಿದಂತೆ ಸುಮಾರು 60 ಜನರು ಅವಶೇಷಗಳ ಅಡಿ ಯಲ್ಲಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ.

ರಕ್ಷಣಾ ಕಾರ್ಯಾಚರಣೆ ಗುರುವಾರ ಆರಂಭವಾದಾಗಿ ನಿಂದ, ಅವಶೇಷಗಳಡಿ ಯಿಂದ 23 ಜನರನ್ನ ಹೊರ ತೆಗೆಯಲಾಗಿದೆ. ಆದ್ರೆ, 14 ಜನರು ಗಾಯಾಳು ಗಳಾಗಿದ್ದಾರೆ.

ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಮಣಿಪುರ ಡಿಜಿಪಿ ಪಿ ಡೌಂಗಲ್, ‘ಅವಶೇಷಗಳಿಂದ 23 ಜನರನ್ನು ಹೊರ ತೆಗೆಯಲಾಗಿದ್ದು, ಅದರಲ್ಲಿ 14 ಜನರು ಮೃತಪಟ್ಟಿದ್ದಾರೆ. ಗ್ರಾಮಸ್ಥರು, ಸೈನ್ಯ ಮತ್ತು ರೈಲ್ವೆ ಸಿಬ್ಬಂದಿ, ಕಾರ್ಮಿಕರು (ಸಮಾಧಿ) ಸೇರಿದಂತೆ 60 ಜನರು ಸಿಲುಕಿರಬಹುದು ಎಂದು ಹೇಳಿದರು.