Thursday, 19th September 2024

ಟ್ರಕ್-ಕಾರು ಡಿಕ್ಕಿ: 14 ಮಂದಿ ಸ್ಥಳದಲ್ಲೇ ಸಾವು

ಪ್ರತಾಪ್ ಗಢ್: ಉತ್ತರ ಪ್ರದೇಶ ರಾಜ್ಯದ ಪ್ರತಾಪ್ ಗಢ್ ನಲ್ಲಿ ಟ್ರಕ್ ಮತ್ತು ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಕ್ಕಳು ಸೇರಿ 14 ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಎಸ್ ಯುವಿ ಕಾರು ಟ್ರಕ್ ಹಿಂಬಾಗಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಗುರುವಾರ ರಾತ್ರಿ ಪ್ರಯಾಗ್ ರಾಜ್- ಲಕ್ನೋ ಹೆದ್ದಾರಿಯ ದೇಶರಾಜ್ ಇನಾರ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ.

ಟ್ರಕ್ ನ ಟಯರ್ ಪಂಕ್ಷರ್ ಆದ ಕಾರಣ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿತ್ತು. ಈ ವೇಳೆ ವೇಗದಿಂದ ಬಂದ ಕಾರು ಟ್ರಕ್ ಗೆ ಗುದ್ದಿದೆ. ಪರಿಣಾಮ ಕಾರಿನ ಅರ್ಧ ಭಾಗ ಟ್ರಕ್ ನ ಒಳಗೆ ಸಿಲುಕಿಕೊಂಡಿತ್ತು.

Leave a Reply

Your email address will not be published. Required fields are marked *