ಭೋಪಾಲ್: ಪರೀಕ್ಷೆ ಆಯೋಜಿಸದೆಯೇ ನೀಡಲಾದ ಫಲಿತಾಂಶದಿಂದ ಅತೃಪ್ತಗೊಂಡಿರುವ ರಾಜ್ಯದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯ 14,000 ವಿದ್ಯಾರ್ಥಿಗಳು ಲಿಖಿತ ಪರೀಕ್ಷೆ ಬರೆದಿದ್ದಾರೆ.
ಕರೋನಾ ಹಿನ್ನೆಲೆಯಲ್ಲಿ ರಾಜ್ಯ ಶಿಕ್ಷಣ ಇಲಾಖೆ ಪರೀಕ್ಷೆಗಳನ್ನು ಆಯೋಜಿಸದೆಯೇ ಅವರ ಹಿಂದಿನ ಫಲಿತಾಂಶದ ಆಧಾರದ ಮೇಲೆ 2020- 21ರ ಫಲಿತಾಂಶ ವನ್ನು ನಿಗದಿಪಡಿಸಿತ್ತು. ಆ ಫಲಿತಾಂಶಕ್ಕೆ 14,000 ವಿದ್ಯಾರ್ಥಿಗಳು ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಅತೃಪ್ತ ವಿದ್ಯಾರ್ಥಿಗಳಿಗಾಗಿ ರಾಜ್ಯ ಸರ್ಕಾರ ಸೋಮವಾರದಿಂದ ವಿಶೇಷ ವಾರ್ಷಿಕ ಪರೀಕ್ಷೆಗೆ ವ್ಯವಸ್ಥೆ ರೂಪಿಸಿತ್ತು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಅಂಕ ಗಳನ್ನು ವರ ಎಸ್ಸೆಸ್ಸೆಲ್ಸಿ ಅಂಕಗಳ ಆಧಾರದ ಮೇಲೆ ಸರ್ಕಾರ ನಿಗದಿಪಡಿಸಿತ್ತು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಅಂಕಗಳನ್ನು ಅವರು ಈ ಹಿಂದಿನ ಮೂರು ವರ್ಷಗಳ ಅವಧಿಯ ತರಗತಿ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳನ್ನು ಆಧರಿಸಿ ನೀಡಲಾಗಿತ್ತು.