Sunday, 15th December 2024

224 ದಿನಗಳಲ್ಲಿ ಅತ್ಯಂತ ಕಡಿಮೆ: 14,313 ಪ್ರಕರಣ ದಾಖಲು

#corona

ನವದೆಹಲಿ : ದೇಶದಲ್ಲಿ ಕರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಮಂಗಳವಾರ ಮತ್ತಷ್ಟು ಇಳಿಕೆ ಕಂಡಿದೆ. 224 ದಿನಗಳಲ್ಲಿಯೇ ಅತ್ಯಂತ ಕಡಿಮೆ ಕೇಸ್ ಕಳೆದ 24 ಗಂಟೆಯಲ್ಲಿ ವರದಿಯಾಗಿದೆ.

ಕಳೆದ 24 ಗಂಟೆಯಲ್ಲಿ 14,313 ಸೋಂಕಿನ ಪ್ರಕರಣಗಳು ವರದಿಯಾಗಿವೆ. ಇದು 224 ದಿನಗಳಲ್ಲಿಯೇ ಅತ್ಯಂತ ಕಡಿಮೆ ಪ್ರಕರಣಗಳ ಸಂಖ್ಯೆ ಎಂದು ತಿಳಿಸಿದೆ. ಸೋಂಕಿತರಾದ 26,579 ಜನರು ಗುಣಮುಖರಾಗಿದ್ದಾರೆ. ಇದುವರೆಗೆ 3,33,20,057 ಸೋಂಕಿತರು ಗುಣಮುಖರಾಗಿದ್ದಾರೆ.

ಹೀಗಾಗಿ, ದೇಶದಲ್ಲಿ ಶೇ.1ರಷ್ಟು ಸಕ್ರಿಯ ಪ್ರಕರಣ ಸಂಖ್ಯೆ ಇದೆ. ಇದೀಗ ದೇಶಾದ್ಯಂತ 2,14,900 ಸಕ್ರಿಯ ಸೋಂಕಿತರು ಇರುವುದಾಗಿ ತಿಳಿಸಿದೆ.