ದೆಹಲಿ:
ಲಾಕ್‌ಡೌನ್ ಸಂಕಷ್ಟದಲ್ಲಿರುವ ಜನರ ಅನುಕೂಲಕ್ಕಾಗಿ ಮಂಗಳವಾರದಿಂದ ದೇಶದ ವಿವಿಧ ಭಾಗಗಳಿಗೆ 15 ವಿಶೇಷ ರೈಲುಗಳ ಸಂಚಾರ ಆರಂಭವಾಗಿದೆ.
ಸೋಮವಾರ ಸಂಜೆ 6 ಗಂಟೆಯಿಂದ ರೈಲ್ವೆೆ ಟಿಕೆಟ್ ಬುಕ್ಕಿಿಂಗ್ ಆರಂಭವಾಗಿದ್ದು, ಮಂಗಳವಾರ ಬೆಳಗ್ಗೆವರೆಗೆ 80 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಿಕೊಂಡಿದ್ದಾರೆ. 16.15 ಕೋಟಿ ರು ಮೌಲ್ಯದ 45,533 ರೈಲ್ವೆ ಟಿಕೆಟ್‌ಗಳು ಬುಕ್ಕಿಿಂಗ್ ಆಗಿವೆ ಎಂದು ಭಾರತೀಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಐದು ವಿಶೇಷ ರೈಲುಗಳಲ್ಲಿ ಮೊದಲ ರೈಲು ಮಂಗಳವಾರ ಬೆಳಗ್ಗೆ ರಾಜಧಾನಿ ದೆಹಲಿಯಿಂದ ವಿಲಾಸ್ಪುರ್‌ಗೆ ಪ್ರಯಾಣ ಬೆಳೆಸಿಯಿತು. ಮುಂದಿನ 7 ದಿನಗಳ ಕಾಲ ರೈಲ್ವೆ ಬುಕ್ಕಿಿಂಗ್ ವ್ಯವಸ್ಥೆ ಮಾಡಲಾಗಿದ್ದು, ಸುಮಾರು ಒಂದೂವರೆ ತಿಂಗಳ ಬಳಿಕ ರೈಲ್ವೆಗೆ ಸಂಪನ್ಮೂಲ ಕ್ರೋಢಿಕರಣವಾಗುತ್ತಿದೆ.