Friday, 20th September 2024

ಅನಿಲ ಸೋರಿಕೆ: 150 ಮಂದಿ ಕಾರ್ಮಿಕರು ಅಸ್ವಸ್ಥ

ಅಮರಾವತಿ: ಆಂಧ್ರಪ್ರದೇಶ ರಾಜ್ಯದ ಅನಕಾಪಲ್ಲಿ ಜಿಲ್ಲೆಯ ಅಚ್ಯುತಪುರಂ ನಲ್ಲಿರುವ ವಿಶೇಷ ಆರ್ಥಿಕ ವಲಯದಲ್ಲಿ ಅನಿಲ ಸೋರಿಕೆ ಸಂಭವಿಸಿ, ಗಾರ್ಮೆಂಟ್ಸ್ ಕಾರ್ಖಾನೆಯ ಕನಿಷ್ಠ 150 ಮಂದಿ ಕಾರ್ಮಿಕರು ಅಸ್ವಸ್ಥ ರಾಗಿದ್ದಾರೆ.

ಮಂಗಳವಾರ ರಾತ್ರಿ ಪಶುವೈದ್ಯಕೀಯ ಔಷಧ ಪ್ರಯೋಗಾಲಯದಿಂದ ಅನಿಲ ಸೋರಿಕೆ ಆಗಿರುವ ಕುರಿತು ಶಂಕಿಸಲಾಗಿದೆ.

ಕಳೆದ ಏಪ್ರಿಲ್ 13ರಂದು, ಪ್ರಯೋಗಾಲಯದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಏಳು ಜನರು ಮೃತಪಟ್ಟಿದ್ದು, 15 ಜನರು ಗಾಯಗೊಂಡಿದ್ದರು.

ಅನಿಲ ಸೋರಿಕೆಯಿಂದ ಅಸ್ವಸ್ಥಗೊಂಡ ಹಲವರಿಗೆ ಕಾರ್ಖಾನೆಯಲ್ಲಿಯೇ ಚಿಕಿತ್ಸೆ ನೀಡಲಾಗಿದ್ದರೆ, ಇನ್ನೂ 50ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರನ್ನು ಬಸ್‌ಗಳು ಮತ್ತು ಕಾರುಗಳಲ್ಲಿ ಅನಕಾಪಲ್ಲಿಯ ಎನ್‌ಟಿಆರ್ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸ ಲಾಯಿತು.

ಅನಿಲ ಸೋರಿಕೆ ಸಂದರ್ಭ 400ಕ್ಕೂ ಹೆಚ್ಚು ಕಾರ್ಮಿಕರು ಶಿಫ್ಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಕೆಲಸ ಮಾಡು ತ್ತಿದ್ದ ಕಾರ್ಮಿಕರಲ್ಲಿ ವಾಕರಿಕೆ, ವಾಂತಿ ಮಾಡಿಕೊಂಡರೆ, ಇನ್ನೂ ಕೆಲವು ಕಾರ್ಮಿಕರು ಮೂರ್ಛೆ ಹೋದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.