Friday, 22nd November 2024

ಡ್ಯಾನ್ಸ್​ ಬಾರ್​ ಮೇಲೆ ದಾಳಿ: 17 ಮಂದಿ ಮಹಿಳೆಯರ ರಕ್ಷಣೆ

#Mumbai Dance Bar

ಮುಂಬೈ: ಡ್ಯಾನ್ಸ್​ ಬಾರ್​ ಮೇಲೆ ನಡೆಸಿದ ದಾಳಿಯಲ್ಲಿ 17 ಮಂದಿ ಮಹಿಳೆ ಯರನ್ನು ರಕ್ಷಿಸಲಾಗಿದೆ. ಮುಂಬೈನ ಅಂಧೇರಿಯಲ್ಲಿ ಘಟನೆ ನಡೆದಿದೆ.

ಅಂಧೇರಿಯಲ್ಲಿರುವ ದೀಪಾ ಬಾರ್​ ಮೇಲೆ ದಾಳಿ ನಡೆಸಲಾಗಿದೆ. ಗ್ರಾಹಕರ ಎದುರು ಮಹಿಳೆಯರಿಂದ ನೃತ್ಯ ಮಾಡಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿದ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ಆರಂಭದಲ್ಲಿ ಸ್ನಾನ ಗೃಹ, ಸ್ಟೋರ್​ ರೂಮ್​, ಅಡುಗೆ ಮನೆ ಹೀಗೆ ಎಲ್ಲಿ ಹುಡುಕಿದರೂ ಯುವತಿ ಯರು ಪತ್ತೆಯಾಗಿರಲಿಲ್ಲ.

ಬಳಿಕ ಪೊಲೀಸರು ಯಾರನ್ನೇ ವಿಚಾರಣೆಗೆ ಒಳಪಡಿಸಿದರೂ ಒಬ್ಬರೂ ಕೂಡ ಮಾಹಿತಿಯನ್ನು ಬಾಯ್ಬಿಟ್ಟಿರಲಿಲ್ಲ. ಈ ವೇಳೆಯಲ್ಲಿ ಮೇಕಪ್​ ರೂಮ್​​ನಲ್ಲಿದ್ದ ದೊಡ್ಡ ಕನ್ನಡಿಯನ್ನು ತೆಗೆಯುವುದು ಕಷ್ಟವಾದ್ದರಿಂದ ಕನ್ನಡಿ ಒಡೆಯಬೇಕಾಯ್ತು. ಈ ವೇಳೆ ರಹಸ್ಯ ಕೋಣೆಯು ಕಣ್ಣಿಗೆ ಬಿದ್ದಿದೆ.

ಮೇಕಪ್​ ರೂಮ್​​ಗೆ ಕನೆಕ್ಟ್​ ಆಗಿದ್ದ ಬೇಸ್​ಮೆಂಟ್​ನ ರಹಸ್ಯಕೋಣೆಯೊಂದರಲ್ಲಿ ಈ ಮಹಿಳೆಯರನ್ನು ಇರಿಸಲಾಗಿತ್ತು. ದಾಳಿ ನಡೆಯುವುದು ಗಮನಕ್ಕೆ ಬರುತ್ತಿದ್ದಂತೆಯೇ ಡ್ಯಾನ್ಸ್​ ಬಾರ್​ನ ಮಾಲೀಕರು ಸುಧಾರಿತ ಎಲೆಕ್ಟ್ರಾನಿಕ್​ ಸಾಧನದಿಂದ ದಾಳಿಯ ಬಗ್ಗೆ ಎಚ್ಚರಿಸಿದ್ದರು ಎನ್ನಲಾಗಿದೆ. ಬಾರ್​ ಮ್ಯಾನೇಜರ್, ಕ್ಯಾಶಿಯರ್​ ಸೇರಿದಂತೆ ಅನೇಕರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.