Saturday, 14th December 2024

ಅಸ್ಸಾಂನಲ್ಲಿ ₹2.72 ಕೋಟಿ ದಾಖಲೆ ರಹಿತ ನಗದು, ₹ 1.1 ಕೋಟಿ ಮೌಲ್ಯದ ಮದ್ಯ ವಶ

ಗುವಾಹಟಿ: ಅಸ್ಸಾಂ ರಾಜ್ಯದಲ್ಲಿ ಒಟ್ಟು ₹2.72 ಕೋಟಿ ದಾಖಲೆ ರಹಿತ ನಗದು ಮತ್ತು ₹ 1.1 ಕೋಟಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಅಧಿಕಾರಿ ಸೋಮವಾರ ತಿಳಿಸಿದ್ದಾರೆ.

ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ 23 ದೂರುಗಳನ್ನು ಚುನಾವಣಾ ಆಯೋಗ ಸ್ವೀಕರಿಸಿದೆ. ಎಂಸಿಸಿ ನಿಯಮಗಳ ಉಲ್ಲಂಘನೆ ತಡೆಯುವ ನಿಟ್ಟಿನಲ್ಲಿ ಪೊಲೀಸರು, ಫ್ಲೈಯಿಂಗ್ ಸ್ಕ್ವಾಡ್‌ಗಳು ಮತ್ತು ಸ್ಥಿರ ಕಣ್ಗಾವಲು ತಂಡಗಳು ನಗದು, ಬೆಲೆಬಾಳುವ ವಸ್ತು ಗಳು, ಮದ್ಯ ಮತ್ತು ನಿಷೇಧಿತ ವಸ್ತುಗಳ ಸಾಗಿಸುವ ಶಂಕಾಸ್ಪದ ವ್ಯಕ್ತಿಗಳ ಮೇಲೆ ನಿಗಾ ವಹಿಸುತ್ತಿವೆ ಎಂದು ಅಧಿಕಾರಿ ತಿಳಿಸಿ ದ್ದಾರೆ.

ಅಸ್ಸಾಂ ವಿಧಾನಸಭೆಯ 126 ಸದಸ್ಯರ ಆಯ್ಕೆಗಾಗಿ ಮಾರ್ಚ್ 27, ಏಪ್ರಿಲ್ 1 ಮತ್ತು ಏಪ್ರಿಲ್ 6 ರಂದು ಮತದಾನ ನಡೆಯಲಿದೆ.