Sunday, 15th December 2024

ಅಮರಾವತಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ: ಇಬ್ಬರ ಸಾವು

ನಾಗ್ಪುರ: ಮಹಾರಾಷ್ಟ್ರದ ಅಮರಾವತಿಯಲ್ಲಿ ಮಂಗಳವಾರ ಬೆಳಗ್ಗೆ ಭಾರಿ ಮಳೆಯ ಕಾರಣ ಮನೆ ಕುಸಿದಿದೆ. ಈ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು ಮೂವರು ಗಾಯಗೊಂಡಿದ್ದಾರೆ.

ನಾಗ್ಪುರದಿಂದ ಸುಮಾರು 150 ಕಿಮೀ ದೂರದಲ್ಲಿರುವ ಅಮರಾವತಿ ಜಿಲ್ಲಾಯ ಚಂದೂರ್ ಬಜಾರ್ ತಾಲೂಕಿನ ಫುಬ್ಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಮರಾವತಿಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಹಲವಾರು ಮನೆಗಳು ಶಿಥಿಲಗೊಂಡಿದೆ.

ಮೂವರನ್ನು ಅವಶೇಷದಿಂದ ರಕ್ಷಿಸಲಾಗಿದ್ದು, ತೀವ್ರ ಗಾಯವಾಗಿದ್ದು ಚಿಕಿತ್ಸೆಗಾಗಿ ಅಮರಾವತಿ ಜಿಲ್ಲಾಸ್ಪತ್ರೆಗೆ ದಾಖಲಿಸ ಲಾಗಿದೆ.