Sunday, 15th December 2024

ನಾಲ್ಕು ಅಂತಸ್ತಿನ ಕಟ್ಟಡ ಕುಸಿತ: ಇಬ್ಬರ ಸಾವು, 12 ಮಂದಿಗೆ ಗಾಯ

ಮುಂಬೈ: ಮುಂಬೈನ ಕುರ್ಲ ಪ್ರದೇಶದ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿ ದ್ದಾರೆ. ಕುರ್ಲಾದ ನಾಯಕ್ ನಗರ ಸೊಸೈಟಿಯಲ್ಲಿರುವ ವಸತಿ ಕಟ್ಟಡದ ಒಂದು ಭಾಗ ಕಳೆದ ಮಧ್ಯರಾತ್ರಿ ಕುಸಿದು ಬಿದ್ದಿದೆ ಎಂದು ವರದಿಯಾಗಿದೆ.

ಗಾಯಾಳುಗಳನ್ನು ಘಾಟ್‌ಕೋಪರ್ ಮತ್ತು ಸಿಯಾನ್‌ನಲ್ಲಿರುವ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಘಾಟ್‌ಕೋಪರ್‌ನ ರಾಜ ವಾಡಿ ಆಸ್ಪತ್ರೆಗೆ ಕರೆತಂದವ ರಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಅವಶೇಷಗಳಡಿ ಸಿಲುಕಿದ್ದ ಮಹಿಳೆಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡ ರಕ್ಷಿಸಿದೆ. ಅವಶೇಷಗಳಡಿಯಿಂದ ಮಹಿಳೆಯನ್ನು ಜೀವಂತವಾಗಿ ಹೊರತರುವಾಗ ರಕ್ಷಕರು ಹರ್ಷೋದ್ಗಾರ ಮಾಡಿ ದರು. ಅಗ್ನಿಶಾಮಕ ದಳದ ಸಿಬ್ಬಂದಿ ಬದುಕು ಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸುಮಾರು 20-22 ಜನರು ಅವಶೇಷಗಳಡಿ ಸಿಲುಕಿದ್ದಾರೆ.

ಸ್ಥಳದಲ್ಲಿ ಸುಮಾರು ಹನ್ನೆರಡು ಅಗ್ನಿಶಾಮಕ ಇಂಜಿನ್‌ಗಳನ್ನು ನಿಯೋಜಿಸ ಲಾಗಿದೆ. ಜೊತೆಗೆ ಎರಡು ರಕ್ಷಣಾ ವ್ಯಾನ್‌ಗಳು, ಇತರ ಅಗ್ನಿಶಾಮಕ ದಳದ ಉಪಕರಣಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್ ತಂಡಗಳು ನಾಗರಿಕ ಸಿಬ್ಬಂದಿ ಮತ್ತು ಪೊಲೀಸರೊಂದಿಗೆ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಕಟ್ಟಡದ ಸಂಪರ್ಕಿತ ವಿಭಾಗವು ಶಿಥಿಲಾವಸ್ಥೆಯಲ್ಲಿದ್ದು ಕುಸಿದಿರುವ ಸಾಧ್ಯತೆಯಿದೆ. ಅದರ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಜೂ.23ರಂದು, ಚೆಂಬೂರ್ ಪ್ರದೇಶದಲ್ಲಿ ಎರಡು ಅಂತಸ್ತಿನ ಕೈಗಾರಿಕಾ ಕಟ್ಟಡದ ಸ್ಲ್ಯಾಬ್ ಕುಸಿದು 22 ವರ್ಷದ ವ್ಯಕ್ತಿ ಮೃತಪಟ್ಟು 10 ಮಂದಿ ಗಾಯಗೊಂಡರು. ಜೂ.9 ರಂದು, ಉಪನಗರ ಬಾಂದ್ರಾದಲ್ಲಿ ಮೂರು ಅಂತಸ್ತಿನ ವಸತಿ ಕಟ್ಟಡವು ಕುಸಿದುಬಿತ್ತು.