Saturday, 14th December 2024

ಮಣಿಪುರ: ನಾಳೆ ಮತದಾನ, ಇಂದು ಬಾಂಬ್ ಸ್ಫೋಟಕ್ಕೆ ಇಬ್ಬರು ಬಲಿ

ಇಂಫಾಲ: ಮಣಿಪುರದಲ್ಲಿ ವಿಧಾನಸಭೆ ಚುನಾವಣೆಗೆ ಒಂದು ದಿನ ಮುನ್ನ ಚುರಾಚಂದ್‌ಪುರದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ.

ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದು, ಐವರಿಗೆ ಗಾಯಗಳಾಗಿವೆ. ಮಣಿಪುರ ವಿಧಾನಸಭಾ ಚುನಾ ವಣೆಯ ಮೊದಲ ಹಂತದ ಮತದಾನಕ್ಕೆ ಗಂಟೆಗಳ ಮೊದಲು, ಶನಿವಾರ ರಾಜ್ಯದ ಚುರಾಚಂದ್‌ಪುರ ಜಿಲ್ಲೆಯಲ್ಲಿ ಬಾಂಬ್ ಸ್ಫೋಟದಲ್ಲಿ 6 ವರ್ಷದ ಮಗು ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.

ಮನೆಯೊಳಗೆ ಸಂಭವಿಸಿದ ಸ್ಫೋಟದಲ್ಲಿ ಇತರ ಐವರು ಗಾಯಗೊಂಡಿದ್ದಾರೆ.

ಮನೆಯೊಳಗೆ ಬಾಂಬ್ ಇರಿಸಲಾಗಿತ್ತು ಮತ್ತು ಮಕ್ಕಳು ತಿಳಿಯದೆ ಅದರೊಂದಿಗೆ ಆಟವಾಡಲು ಪ್ರಾರಂಭಿಸಿದರು, ನಂತರ ಅದು ಸ್ಫೋಟಗೊಂಡಿದೆ. ಪೊಲೀಸರ ಪ್ರಕಾರ, ಗಾಯಗೊಂಡವರನ್ನು ಚುರಚಂದಪುರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸೋಮವಾರ ಚುರಚಂದಪುರ ಸೇರಿದಂತೆ ಹಲವೆಡೆ ಮೊದಲ ಹಂತದ ಮತದಾನ ನಡೆಯಲಿದ್ದು, 173 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮಣಿಪುರದ ಮಾಜಿ ಮುಖ್ಯಮಂತ್ರಿ ಒಕ್ರಾಮ್ ಇಬೋಬಿ ಸಿಂಗ್, ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಮತ್ತು ರಮೇಶ್ ಸಹಿ ಮಾಡಿರುವ ಹೇಳಿಕೆಯಲ್ಲಿ ಮಣಿಪುರದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ನೇರ ಮತ್ತು ಸ್ಪಷ್ಟ ಬೆದರಿಕೆಯಾಗಿದೆ ಎಂದು ಹೇಳಿದ್ದಾರೆ.

ಚುನಾವಣೆಯ ಪೂರ್ವದಲ್ಲಿ, ಮಣಿಪುರದ ಬಿಜೆಪಿ ನೇತೃತ್ವದ ಸರ್ಕಾರದ ಮಿತ್ರಪಕ್ಷವಾದ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ತನ್ನ ಅಭ್ಯರ್ಥಿಗಳಿಗೆ ಹಲವಾರು ಉಗ್ರಗಾಮಿ ಸಂಘಟನೆಗಳ ಕಾರ್ಯಕರ್ತ ರಿಂದ ಬೆದರಿಕೆ ಇದೆ ಎಂದು ಚುನಾವಣಾ ಆಯೋಗಕ್ಕೆ ಈ ಹಿಂದೆ ದೂರು ನೀಡಿತ್ತು.

ಮಣಿಪುರದಲ್ಲಿ ಮೊದಲ ಹಂತದ ಮತದಾನವು ಫೆಬ್ರವರಿ 28ರಂದು ನಡೆಯಲಿದ್ದು, 15 ಮಂದಿ ಮಹಿಳೆಯರು ಸೇರಿ ಒಟ್ಟು 173 ಅಭ್ಯರ್ಥಿಗಳು ಕಣ ದಲ್ಲಿದ್ದಾರೆ. 15 ಮಂದಿ ಮಹಿಳಾ ಅಭ್ಯರ್ಥಿಗಳ ಪೈಕಿ ಆರು ಮಂದಿ ಇಂಫಾಲ್ ಪಶ್ಚಿಮದಿಂದ, ತಲಾ ಮೂವರು ಬಿಷ್ಣುಪುರ್ ಹಾಗೂ ಇಬ್ಬರು ಇಂಫಾಲ್ ಮತ್ತು ಒಬ್ಬರು ಚರಾಚಂದ್‌ಪುರ್ ಜಿಲ್ಲೆಯವರು.

ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಐದು ರಾಜ್ಯಗಳಾದ ಮಣಿಪುರ, ಪಂಜಾಬ್, ಉತ್ತರ ಪ್ರದೇಶ, ಗೋವಾ ಮತ್ತು ಉತ್ತರಾಖಂಡಕ್ಕೆ ಮತ ಎಣಿಕೆ ನಡೆಯಲಿದೆ.