Thursday, 12th December 2024

ಉತ್ತರ ಪ್ರದೇಶ ಮೊದಲ ಹಂತದಲ್ಲಿ ಶೇ.20.3ರಷ್ಟು ಮತದಾನ

ನೋಯ್ಡಾ: ಉತ್ತರ ಪ್ರದೇಶ ರಾಜ್ಯದಲ್ಲಿ ಗುರುವಾರ ಮೊದಲ ಹಂತದ ಮತದಾನ ಆರಂಭವಾಗಿದ್ದು, ಬೆಳಗ್ಗೆ 11 ಗಂಟೆಯ ಹೊತ್ತಿಗೆ ಶೇ.20.3ರಷ್ಟು ಮತದಾನವಾಗಿದೆ.

ಚುನಾವಣಾ ಆಯೋಗದ ಪ್ರಕಾರ, ಶಮ್ಲಿಯಲ್ಲಿ ಶೇ.22.83 ರಷ್ಟು ಮತದಾನ, ಮುಜಾಫರ್ ನಗರ ಶೇ.22.65, ಮೀರುತ್ ಶೇ.18.54, ಬಾಘಪತ್ ಶೇ.22.30, ಘಾಜಿಯಾಬಾದ್ ಶೇ.18.24, ಹಾಪುರ್ ಶೇ.22.80, ಗೌತಮಬುದ್ಧ ನಗರ ಶೇ.19.23, ಬುಲಂದ್ ಶೆಹರ್ ಶೇ.21.62, ಅಲಿಗಢ ಶೇ.17.91, ಮಥುರಾ ಶೇ.20.73, ಆಗ್ರಾ ಶೇ.20.30ರಷ್ಟು ಮತದಾನವಾಗಿದೆ.

58 ಕ್ಷೇತ್ರಗಳಲ್ಲಿ 623 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು, 2.27 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸ ಲಿದ್ದಾರೆ. ಮತದಾನ ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ.

ಮೊದಲ ಹಂತದ ಮತದಾನಕ್ಕೆ ಒಳಪಟ್ಟಿರುವ ಕ್ಷೇತ್ರಗಳು ಜಾಟರು ಪ್ರಧಾನವಾಗಿರುವ ಪಶ್ಚಿಮ ಉತ್ತರ ಪ್ರದೇಶವನ್ನು ಒಳಗೊಂಡಿದೆ.