Sunday, 15th December 2024

ನಿಯಮ ಉಲ್ಲಂಘನೆ: ಭಾರತೀಯರ 20 ಲಕ್ಷ ಖಾತೆ ಬ್ಯಾನ್ ಮಾಡಿದ ವಾಟ್ಸಪ್

ನವದೆಹಲಿ: ಆಗಸ್ಟ್‌ನಲ್ಲಿ ತನ್ನ ಷರತ್ತು ಹಾಗೂ ನಿಯಮಗಳನ್ನು ಉಲ್ಲಂಘಿಸಿದ ಭಾರತೀಯರ ಸುಮಾರು 20 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಫೇಸ್‌ಬುಕ್ ಒಡೆತನದ ವಾಟ್ಸಪ್ ಕಂಪೆನಿ ಶನಿವಾರ ತಿಳಿಸಿದೆ.

20,70,000 ಖಾತೆಗಳನ್ನು ನಿಷೇಧ ಮಾಡಲಾಗಿದೆ ಎಂದು ವಾಟ್ಸ್‌ಆಯಪ್ ತಿಳಿಸಿದೆ. ಅಲ್ಲದೇ 420 ಕುಂದು ಕೊರತೆ ದೂರು ಗಳನ್ನು ಆಗಸ್ಟ್‌ ತಿಂಗಳಲ್ಲಿ ವಾಟ್ಸ್‌ಆಯಪ್‌ ಸ್ವೀಕರಿಸಿದೆ ಎಂಬು ದು ತಿಳಿದು ಬಂದಿದೆ.

ಜೂನ್ 16 ರಿಂದ ಜುಲೈ 31 ರವರೆಗೆ 30 ಲಕ್ಷ ಭಾರತೀಯರ ವಾಟ್ಸ್‌ಆಯಪ್ ಖಾತೆಗಳನ್ನು ನಿಷೇಧಿಸಲಾಗಿದ್ದು, ಒಟ್ಟಾರೆಯಾಗಿ ದುರುಪಯೋಗ ತಡೆಯಲು ಜಗತ್ತಿನಲ್ಲಿ ಪ್ರತಿ ತಿಂಗಳು ಸರಾಸರಿ 80 ಲಕ್ಷ ಖಾತೆಗಳನ್ನು ನಿಷೇಧಿಸುತ್ತಿದೆ.

ಷರತ್ತು ಹಾಗೂ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಹಾಗೂ ದುರುಪಯೋಗ ತಡೆ ಯಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ. ಸದ್ಯ ಅಕೌಂಟ್‌ಗಳನ್ನು ಪುನರ್‌ ಸ್ಥಾಪಿಸಿ ಕೊಳ್ಳುವ ಅವಕಾಶ ಬಳಕೆದಾರನಿಗೆ ಇಲ್ಲವಾದರೂ ಶೀಘ್ರದಲ್ಲಿಯೇ ಈ ಆಯ್ಕೆ ಕೂಡ ವಾಟ್ಸ್‌ ಯಪ್‌ನಲ್ಲಿ ಇರಲಿದೆ.