ಬೆಂಗಳೂರು : ಜಾವಾ ಯೆಜ್ಡಿ ಮೋಟಾರ್ ಸೈಕಲ್ಸ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ನಿಯೋ-ಕ್ಲಾಸಿಕ್ ಮೋಟಾರ್ ಸೈಕಲ್ ಸರಣಿಯಲ್ಲಿ ಖ್ಯಾತಿ ಪಡೆಯುತ್ತಿದೆ. ಅಂತೆಯೇ ಕಂಪನಿಯು ಈಗ ಜಾವಾ 42 ಲೈಫ್ ಸರಣಿಯ ಹೊಸ ಬೈಕ್ ಅನ್ನು ಮಾರುಕಟ್ಟೆಗೆ ಇಳಿಸಿದೆ. ಅದುವೇ ಹೊಸ 350 ಜಾವಾ 42 ಎಫ್ ಜೆ (Jawa 42 FJ) . 42 ಮತ್ತು 42 ಬಾಬ್ಬರ್ ಬೈಕುಗಳ ಯಶಸ್ಸಿನ ಆಧಾರದ ಮೇಲೆ, 350 ಜಾವಾ 42 ಎಫ್ ಜೆ ಹೊಸ ವಿನ್ಯಾಸ ಮತ್ತು 350 ಸಿಸಿ ಎಂಜಿನ್ ನ ಹೊಸ ವಿನ್ಯಾಸದೊಂದಿಗೆ ರಸ್ತೆಗೆ ಇಳಿದಿದೆ. ಈ ಬೈಕಿನ ಹೆಸರಿನಲ್ಲಿರುವ “ಎಫ್‌ಜೆʼʼ ಜಾವಾ ಕಂಪನಿಯ ಸ್ಥಾಪಕ ಫ್ರಾಂಟಿಸೆಕ್ ಜಾನೆಸೆಕ್ ಅವರ ಹೆಸರಿನ ಮೊದಲ ಎರಡು ಅಕ್ಷರಗಳಾಗಿವೆ.
2024ರ ಆವೃತ್ತಿಯತ ಜಾವಾ 42 ಬೈಕ್, ಮೋಟಾರ್ ಸೈಕಲ್ ಎಂಜಿನಿಯರಿಂಗ್‌ನಲ್ಲಿ ನಮ್ಮ ವಿನ್ಯಾಸ-ಆಧಾರಿತ ಉತ್ಪಾದನೆಗೆ ಪೂರಕವಾಗಿದೆ ಎಂದು ಜಾವಾ ಯೆಜ್ಡಿ ಮೋಟಾರ್ ಸೈಕಲ್ಸ್ ನ ಸಹ ಸಂಸ್ಥಾಪಕ ಅನುಪಮ್ ತರೇಜಾ ಹೇಳಿದ್ದಾರೆ. ನಾವು ಈ ಬೈಕಿ ರಸ್ತೆಗಿಳಿಸುವುದಕ್ಕೆ ಸಮಯ ತೆಗೆದುಕೊಂಡಿದ್ದೇವೆ. ಬೆಲೆ. ಕಾರ್ಯಕ್ಷಮತೆಗೆ ಪೂರಕವಾಗಿ ವಿನ್ಯಾಸ ಮಾಡಲಾಗಿದೆ. ಆಕರ್ಷಕ ಕಾರ್ಯಕ್ಷಮತೆ, ನಿಖರ ಎಂಜಿನಿಯರಿಂಗ್ ಮೂಲಕ ರಚಿಸಲಾಗಿದೆ ಎಂದು ಹೇಳಿದ್ದಾರೆ.
2024ರ ಜಾವಾ 42 ಎಫ್‌ಜೆ ಬೆಲೆ ಎಷ್ಟು?
ಜಾವಾ 42 ಎಫ್‌ಜೆ ಬೈಕ್ ಪ್ರೀಮಿಯಂ ಬಣ್ಣಗಳಲ್ಲಿ ಲಭ್ಯವಿದ್ದು, ಇದರ ಬೆಲೆಯು ರೂ.1,99,142ಗಳಾಗಿದೆ. ಬೈಕ್‌ನ ಡಿಸ್ಟ್ರಿಬ್ಯೂಷನ್ ಅಕ್ಟೋಬರ್ 2, 2024 ರಿಂದ ಪ್ರಾರಂಭವಾಗಲಿದೆ ಎಂದು ಕಂಪನಿಯು ಮಾಹಿತಿ ನೀಡಿದೆ., 350 ಜಾವಾ 42 ಎಫ್‌ಜೆ ಬೈಕ್ ಅನೋಡೈಸ್ಡ್, ಬ್ರಷ್ ಮಾಡಿದ ಅಲ್ಯೂಮಿನಿಯಂ ಫ್ಯೂಯಲ್ ಟ್ಯಾಂಕ್ ಕ್ಲಾಡಿಂಗ್ ನೊಂದಿಗೆ ವಿಶಿಷ್ಟ ಆಕರ್ಷಣೆ ಹೊಂದಿದೆ. ವಿವಿಧ ಬಣ್ಣ ಆಯ್ಕೆಗಳು ಮತ್ತು ಜಾವಾ ಬ್ರ್ಯಾಂಡಿಂಗ್ ಆಯ್ಕೆಗಳ ಮೂಲಕ ಕಸ್ಟಮೈಸ್ಡ್ ಮಾಡುವುದಕ್ಕೂ ಅವಕಾಶ ನೀಡಲಾಗಿದೆ.
ಪೆಟ್ರೋಲ್ ಟ್ಯಾಂಕ್ ಹೊಂದಿರುವ ಕ್ಲಾಡಿಂಗ್‌ಗೆ ಪೂರಕವಾಗಿ ಅಲ್ಯೂಮಿನಿಯಂ ಹೆಡ್ ಲ್ಯಾಂಪ್ ಹೋಲ್ಡರ್ ಮತ್ತು ಗ್ರಾಬ್ ಹ್ಯಾಂಡಲ್‌ಗಳು ಹಾಗೂ ಅಲ್ಯೂಮಿನಿಯಂ ಫುಟ್ ಪೆಗ್‌ಗಳಿವೆ. ಆಫ್-ಸೆಟ್ ಫ್ಯೂಯಲ್ ಕ್ಯಾಪ್ ಟ್ಯಾಂಕ್ ವಿನ್ಯಾಸಕ್ಕೆ ಪೂರಕವಾಗಿದೆ. ಪ್ರೀಮಿಯಂ ಹೊಲಿಗೆಯೊಂದಿಗೆ ಅಗಲ ಮತ್ತು ಸಮತಟ್ಟಾದ ಸೀಟ್‌ಗಳನ್ನು ನೀಡಲಾಗಿದೆ. ಇದು ಸವಾರನಿಗೆ ಗರಿಷ್ಠ ಆರಾಮ ನೀಡುತ್ತದೆ.
2024ರ ಜಾವಾ 42 ಎಫ್‌ಜೆ ಫೀಚರ್‌ಗಳು
ಈ ಬೈಕ್ ಸಂಪೂರ್ಣ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ನೊಂದಿಗೆ ಆಲ್-ಎಲ್ಇಡಿ ಲೈಟಿಂಗ್ ಪ್ಯಾಕೇಜ್ ನೀಡಲಾಗಿದೆ. ರೈಡಿಂಗ್ ಪೂರಕ ಅಂಶಗಳನ್ನು ಇದು ತೋರಿಸುತ್ತದೆ. ಜಾವಾ 42 ಎಫ್‌ಜೆ ಬೈಕಿನಲ್ಲಿ 350 ಆಲ್ಫಾ2 ಎಂಜಿನ್ ಇದೆ. ಈ ಎಂಜಿನ್ 29.2 ಬಿ ಹೆಚ್‌ಪಿ ಪವರ್ ಮತ್ತು 29.6 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 42 ಎಫ್‌ಜೆ ಬೈಕ್ ಅನ್ನು ದೃಢ ಕಾರ್ಯಕ್ಷಮತೆ ಪಡೆಯಲು ವಿನ್ಯಾಸಗೊಳಿಸಲಾಗಿದೆ. ಇದುವೇ ನ್ಯೂ ಕ್ಲಾಸಿಕ್ ಲುಕ್‌ಗೆ ಹೆಚ್ಚಿನ ಮೌಲ್ಯ ಒದಗಿಸುತ್ತಿದೆ.
42 ಎಫ್‌ಜೆ ಬೈಕ್ 1,440 ಎಂಎಂ ವೀಲ್ ಬೇಸ್ ಹೊಂದಿದೆ. ಬೈಕ್ ಡಬಲ್ ಕ್ರೇಡಲ್ ಫ್ರೇಮ್ ರಚನೆಗೊಂಡಿದೆ. ಹಿಂಭಾಗದ ಸಬ್ ಫ್ರೇಮ್ ಇತರ ಜಾವಾ ಮೋಟಾರ್ ಸೈಕಲ್‌ಗಳಗಿಂತ ಭಿನ್ನವಾಗಿದೆ. ಈ ಬೈಕಿನ ಮುಂಭಾಗದಲ್ಲಿ 135 ಎಂಎಂ ಮತ್ತು ಹಿಂಭಾಗದಲ್ಲಿ 100 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಬ್ರೇಕಿಂಗ್ ಸೆಟಪ್ ಡ್ಯುಯಲ್-ಚಾನೆಲ್ ಎಬಿಎಸ್ ಒಳಗೊಂಡಿದೆ.