Thursday, 12th December 2024

2024ರ ಲೋಕಸಭೆ ಚುನಾವಣೆಯಲ್ಲಿ ಅಚ್ಚರಿಯ ಗೆಲುವಿನ ವಿಶ್ವಾಸ: ರಾಹುಲ್ ಗಾಂಧಿ

ವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಇನ್ನೆರಡು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿಯಾಗಲಿದೆ ಎಂಬ ಭಾವನೆ ಇದೆ ಎಂದರು.

ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ಮುಂಬರುವ ಮೂರು ಮತ್ತು ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಅದೇ ಫಲಿತಾಂಶ ವನ್ನ ಸಾಧಿಸಲಿದೆ ಎಂದರು. ಇನ್ನು 2024ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶವು ಖಂಡಿತ ವಾಗಿಯೂ ಜನರನ್ನ ಆಶ್ಚರ್ಯಗೊಳಿಸುತ್ತದೆ ಎಂದು ಹೇಳಿದರು.

ಸದ್ಯ ಎಲ್ಲ ವಿರೋಧ ಪಕ್ಷಗಳೊಂದಿಗೆ ವಿಸ್ತೃತ ಚರ್ಚೆ ನಡೆಸುತ್ತಿದ್ದೇವೆ ಎಂದು ರಾಹುಲ್ ಬಹಿರಂಗಪಡಿಸಿದರು. ಪ್ರಧಾನಿ ಮೋದಿಯವರ ವಿಶ್ವದಾದ್ಯಂತ ಜನಪ್ರಿಯತೆಯ ಬಗ್ಗೆ ಮಾತನಾಡಿದ ರಾಹುಲ್, ದೇಶದ ಎಲ್ಲಾ ಸಂಸ್ಥೆ ಗಳ ಮೇಲೆ ಸರ್ಕಾರವು ನಿಯಂತ್ರಣ ಹೊಂದಿದ್ದು, ಈ ಸುದ್ದಿಯನ್ನ ಎಂದಿಗೂ ನಂಬುವುದಿಲ್ಲ ಎಂದರು.