ಅಂತರರಾಜ್ಯ ಮಾದಕವಸ್ತು ಕಳ್ಳಸಾಗಣೆ ಗ್ಯಾಂಗ್ ಬಗ್ಗೆ ಸುಳಿವು ಪಡೆದುಕೊಂಡ ಮುಂಬೈ ಎನ್‌ಸಿಬಿ ತಂಡವು ಮುಂಬೈ-ಪುಣೆ ಹೆದ್ದಾರಿಯ ಖೋಪೋಲಿಯಲ್ಲಿ ಬಲೆ ಬೀಸಿದ್ದು, ಮಹಾನಗರದ ನಿವಾಸಿಯನ್ನು ಬಂಧಿಸಿದೆ ಎಂದು ಹೇಳಿದ್ದಾರೆ.
ಕಂದು ಬಣ್ಣದ ಅಂಟಿನ ಟೇಪ್‌ಗಳಿಂದ ಮುಚ್ಚಿದ್ದ 98 ಪ್ಯಾಕೆಟ್‌ಗಳಲ್ಲಿ ಗಾಂಜಾ ಪತ್ತೆಯಾಗಿದ್ದು, ನಿಷಿದ್ಧ ವಸ್ತುಗಳನ್ನು ಪ್ಯಾಕ್ ಮಾಡುವ ಸಾಮಾನ್ಯ ವಿಧಾನ ಇದಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಗಾಂಜಾವನ್ನು ಪುಣೆಯಲ್ಲಿ ವಶಪಡಿಸಿಕೊಳ್ಳಲಾಗಿದ್ದು, ಮುಖ್ಯ ಪೂರೈಕೆದಾರರು ಅದನ್ನು ಆಂಧ್ರಪ್ರದೇಶ-ಒಡಿಶಾ ಗಡಿಯಿಂದ ಪಡೆದಿರಬಹುದು. ಅದರ ಕೆಲವು ಭಾಗ ಪುಣೆಗೆ ಮತ್ತು ಕೆಲವು ಇಲ್ಲಿನ ಗೋವಂಡಿ ಮತ್ತು ಮಾನ್‌ಖುರ್ದ್‌ನಂತಹ ಪ್ರದೇಶ ಗಳಿಗೆ ಮೀಸಲಾಗಿರುವುದು ನಮ್ಮ ತನಿಖೆಯಿಂದ ತಿಳಿದುಬಂದಿದೆ.
ಪೆಡ್ಲಿಂಗ್ ನೆಟ್‌ವರ್ಕ್, ಅದರ ಪೂರೈಕೆದಾರರು, ಕ್ಯಾರಿಯರ್ಸ್‌ಗಳು ಮತ್ತು ಪೆಡ್ಲರ್‌ಗಳು ಮತ್ತು ಖರೀದಿದಾರರು ಯಾರೆಂಬು ದನ್ನು ತಿಳಿಯಲು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.