ನವದೆಹಲಿ : ಬೇಸಿಗೆ ಪ್ರವಾಸಗಳನ್ನು ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಇಲಾಖೆಯು 217 ವಿಶೇಷ ರೈಲುಗಳನ್ನು ನಿರ್ವಹಿಸಲು ಮುಂದಾಗಿದೆ.
ವಿಶೇಷ ರೈಲುಗಳು ದೇಶಾದ್ಯಂತ ಪ್ರಮುಖ ಸ್ಥಳಗಳನ್ನು ಸಂಪರ್ಕಿಸುತ್ತವೆ. ಈ ರೈಲುಗಳು ಪಾಟ್ನಾ, ಮುಂಬೈ, ಬೆಂಗಳೂರು ಮತ್ತು ಚೆನ್ನೈನಂತಹ ಜನಪ್ರಿಯ ಪ್ರವಾಸಿ ತಾಣಗಳಿಗೆ ಹೋಗುವವರ ಪ್ರಯಾಣ ಅಗತ್ಯಗಳನ್ನು ಪೂರೈಸುತ್ತವೆ. ಈ ಸೌಲಭ್ಯವು ಬೇಸಿಗೆಯ ತಿಂಗಳುಗಳಲ್ಲಿ ಮಾತ್ರ ಲಭ್ಯ ವಿರುತ್ತದೆ.
ನೈಋತ್ಯ ರೈಲ್ವೆಯಿಂದ 69 ವಿಶೇಷ ರೈಲುಗಳು ಕಾರ್ಯ ನಿರ್ವಹಿಸಲಿವೆ. ದಕ್ಷಿಣ ಕೇಂದ್ರ ಭಾಗಕ್ಕೆ 48 ರೈಲುಗಳನ್ನು ನಿಯೋಜಿಸಿದೆ. ನೈಋತ್ಯ ರೈಲ್ವೆ ವಲಯವು ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣದ ರೈಲು ನಿಲ್ದಾಣಗಳನ್ನು ಒಳಗೊಳ್ಳುತ್ತದೆ. ಪಶ್ಚಿಮ ರೈಲ್ವೆ ವಲಯಕ್ಕೆ 40 ಮತ್ತು ದಕ್ಷಿಣ ರೈಲ್ವೆ ವಲಯದಲ್ಲಿ 20 ವಿಶೇಷ ರೈಲುಗಳು ಸಂಚರಿಸಲಿವೆ.
ಪೂರ್ವ ಕೇಂದ್ರ ರೈಲ್ವೆ ವಲಯಗಳಲ್ಲಿ ತಲಾ 10 ವಿಶೇಷ ರೈಲುಗಳನ್ನು ನಿರ್ವಹಿಸಲಿವೆ. ಬಿಹಾರವನ್ನು ಒಳಗೊಂಡಿ ರುವ ಪೂರ್ವ ಕೇಂದ್ರ ರೈಲ್ವೆ ವಲಯವು ಒಟ್ಟು 296 ಟ್ರಿಪ್‌ಗಳನ್ನು ಪೂರ್ಣಗೊಳಿಸುವ 10 ವಿಶೇಷ ರೈಲುಗಳು ಸಂಚಾರ ನಡೆಸಲಿವೆ.
ವಾಯುವ್ಯ ರೈಲ್ವೆ ವಲಯವು 16 ಬೇಸಿಗೆ ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ಘೋಷಿಸಿದೆ.