Wednesday, 11th December 2024

ಗರ್ಭಿಣಿ ಶಿಕ್ಷಕಿಗೆ ಕಿರುಕುಳ: 22 ವಿದ್ಯಾರ್ಥಿಗಳ ಅಮಾನತು

ದಿಬ್ರುಗಡ: ಜವಾಹರ ನವೋದಯ ವಿದ್ಯಾಲಯದ ಕೆಲವು ವಿದ್ಯಾರ್ಥಿಗಳು 5 ತಿಂಗಳ ಗರ್ಭಿಣಿ ಶಿಕ್ಷಕಿಯೊಬ್ಬರಿಗೆ ಕಿರುಕುಳ ನೀಡಿ ಅಯೋಗ್ಯ ರೀತಿಯಲ್ಲಿ ವರ್ತಿಸಿದ್ದಾರೆ.

ಈ ಘಟನೆಯಿಂದಾಗಿ ಶಾಲೆಯಲ್ಲಿ ಗೊಂದಲವಾದ ನಂತರ ಶಾಲಾ ಆಡಳಿತ ಮಂಡಳಿ ಯು ಪೊಲೀಸರನ್ನು ಕರೆಸಿ ಪರಿಸ್ಥಿತಿ ಯನ್ನು ಹತೋಟಿಗೆ ತಂದಿತು. ಪ್ರಕರಣದಲ್ಲಿ ಶಾಲೆಯು 22 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದೆ.