Sunday, 13th October 2024

ಭೂಪೇಂದ್ರ ಪಟೇಲ್ ನೇತೃತ್ವದ ಸಂಪುಟ ರಚನೆ: 24 ಸಚಿವರಿಂದ ಪ್ರಮಾಣ ವಚನ ಸ್ವೀಕಾರ

ಗಾಂಧಿನಗರ : ಗುಜರಾತ್‌ ನೂತನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನೇತೃತ್ವದ ಸಚಿವ ಸಂಪುಟ ರಚನೆಯಾಗಿದ್ದು, 24 ನೂತನ ಸಚಿವ ಸಂಪುಟ ಸೇರಿದ್ದಾರೆ.

ವಿಧಾನಸಭೆ ಮಾಜಿ ಸ್ಪೀಕರ್ ರಾಜೇಂದ್ರ ತ್ರಿವೇದಿ ಮತ್ತು ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಜಿತು ವಘಾನಿ ಸೇರಿ ದಂತೆ 24 ಸಚಿವರು ಗುರುವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹಿಂದಿನ ವಿಜಯ್ ರೂಪಾನಿ ನೇತೃತ್ವದ ಸಚಿವಾಲಯದಲ್ಲಿದ್ದ ಯಾವುದೇ ಸಚಿವರನ್ನ ಇಲ್ಲಿ ಸ್ಥಾನ ಕಲ್ಪಿಸಲಾಗಿಲ್ಲ.

ರಾಜ್ಯಪಾಲ ಆಚಾರ್ಯ ದೇವ್ ವ್ರತ್ ಅವರು ಐದು ರಾಜ್ಯ ಸಚಿವರು ಸೇರಿದಂತೆ 10 ಕ್ಯಾಬಿನೆಟ್ ಸಚಿವರು ಮತ್ತು 14 ರಾಜ್ಯ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

ಕಳೆದ ಸೋಮವಾರ ರಾಜ್ಯದ 17ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಭೂಪೇಂದ್ರ ಪಟೇಲ್ ಅವರು ರಾಜಭವನ ಸಮಾರಂಭದಲ್ಲಿ ಹಾಜರಿದ್ದರು. ರಾಜೇಂದ್ರ ತ್ರಿವೇದಿ, ಜಿತು ವಘಾನಿ, ರುಷಿಕೇಶ್ ಪಟೇಲ್, ಪೂರ್ಣೇಶ್ ಮೋದಿ, ರಾಘವ್ ಜಿ ಪಟೇಲ್, ಕಾನುಭಾಯಿ ದೇಸಾಯಿ, ಕಿರಿತ್ಸಿನ್ ರಾಣಾ, ನರೇಶ್ ಪಟೇಲ್, ಪ್ರದೀಪ ಪರ್ಮಾರ್ ಮತ್ತು ಅರ್ಜುನ್ ಸಿಂಗ್ ಚೌಹಾಣ್ ಅವ್ರು ಕ್ಯಾಬಿನೆಟ್ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.