ಜೊತೆಗೆ ಬದರಿನಾಥ್ ಮತ್ತು ಕೇದಾರನಾಥ ದೇವಾಲಯಗಳಿಗೆ ರಾಷ್ಟ್ರೀಯ ಹೆದ್ದಾರಿಗಳನ್ನು ಮುಚ್ಚಲಾಗಿದೆ.
ಭಾರಿ ಭೂಕುಸಿತದ ನಂತರ ಲಂಬಗಡದಲ್ಲಿ 10-15 ಮೀಟರ್ ವಿಸ್ತಾರವಾದ ರಿಷಿಕೇಶ್-ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಹಾನಿಯಾಗಿದೆ. ರಿಷಿಕೇಶ-ಕೇದಾರನಾಥ ರಾಷ್ಟ್ರೀಯ ಹೆದ್ದಾರಿಯನ್ನು ಬನ್ಸ್ವಾರಾದಲ್ಲಿಯೂ ನಿರ್ಬಂಧಿಸಲಾಗಿದೆ.
ಶುಕ್ರವಾರ ನೈನಿತಾಲ್ -ಭೋವಾಲಿ ರಸ್ತೆಯಲ್ಲಿ ಭೂಕುಸಿತ ವರದಿಯಾಗಿದೆ. ಡೆಹ್ರಾಡೂನ್ ಹವಾಮಾನ ಕೇಂದ್ರ, ಜುಲೈ 29 ರಿಂದ ಮುಂದಿನ ನಾಲ್ಕು ದಿನಗಳವರೆಗೆ ಆರೆಂಜ್ ಅಲರ್ಟ್ ನೀಡಿದೆ.
ಬಿಹಾರದಲ್ಲಿ ಆಗಸ್ಟ್ 2 ರವರೆಗೆ ಗುಡುಗು ಸಹಿತ ಮಳೆಯಾಗಲಿದ್ದು, ಜಾರ್ಖಂಡ್‌ನಲ್ಲಿ ಜು.31 ರಿಂದ ಆಗಸ್ಟ್ 2 ರವರೆಗೆ, ಪಶ್ಚಿಮ ಬಂಗಾಳದಲ್ಲಿ ಜು.31 ಮತ್ತು ಆಗಸ್ಟ್ 1 ರಂದು ಮಳೆಯಾಗುವ ಸಾಧ್ಯತೆ ಇದೆ.