Sunday, 15th December 2024

ಉತ್ತರಾಖಂಡದಲ್ಲಿ ನಿರಂತರ ಮಳೆ: 250ಕ್ಕೂ ಹೆಚ್ಚು ರಸ್ತೆಗಳು ಬಂದ್‌

ಉತ್ತರಾಖಂಡ: ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ 250ಕ್ಕೂ ಹೆಚ್ಚು ರಸ್ತೆಗಳು ಮತ್ತು ಹಲವು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಬಂಧಿಸ ಲಾಗಿದೆ.

ಜೊತೆಗೆ ಬದರಿನಾಥ್ ಮತ್ತು ಕೇದಾರನಾಥ ದೇವಾಲಯಗಳಿಗೆ ರಾಷ್ಟ್ರೀಯ ಹೆದ್ದಾರಿಗಳನ್ನು ಮುಚ್ಚಲಾಗಿದೆ.

ಭಾರಿ ಭೂಕುಸಿತದ ನಂತರ ಲಂಬಗಡದಲ್ಲಿ 10-15 ಮೀಟರ್ ವಿಸ್ತಾರವಾದ ರಿಷಿಕೇಶ್-ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಹಾನಿಯಾಗಿದೆ. ರಿಷಿಕೇಶ-ಕೇದಾರನಾಥ ರಾಷ್ಟ್ರೀಯ ಹೆದ್ದಾರಿಯನ್ನು ಬನ್ಸ್ವಾರಾದಲ್ಲಿಯೂ ನಿರ್ಬಂಧಿಸಲಾಗಿದೆ.

ಬಿಹಾರದಲ್ಲಿ ಆಗಸ್ಟ್ 2 ರವರೆಗೆ ಗುಡುಗು ಸಹಿತ ಮಳೆಯಾಗಲಿದ್ದು, ಜಾರ್ಖಂಡ್‌ನಲ್ಲಿ ಜು.31 ರಿಂದ ಆಗಸ್ಟ್ 2 ರವರೆಗೆ, ಪಶ್ಚಿಮ ಬಂಗಾಳದಲ್ಲಿ ಜು.31 ಮತ್ತು ಆಗಸ್ಟ್ 1 ರಂದು ಮಳೆಯಾಗುವ ಸಾಧ್ಯತೆ ಇದೆ.