ನವದೆಹಲಿ: ಲೋಕಸಭೆ(Loksabha)ಯ 543 ಸಂಸದರ ಪೈಕಿ, 251 (46%) ಸದಸ್ಯರ ಹೆಸರಿನಲ್ಲಿ ಪ್ರಕರಣ ದಾಖಲಾಗಿದ್ದು, ಈ ಪೈಕಿ 17 ಮಂದಿ ಅಪರಾಧಿ ಎಂದು ಅಸೋಸಿಯೇಸನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ (Association of Democratic Reforms)ನಡೆಸಿದ ಸರ್ವೇ ವರದಿ ತಿಳಿಸಿದೆ.
ಇದು ಲೋಕಸಭೆಗೆ ಆಯ್ಕೆಯಾದ ಅತೀ ಹೆಚ್ಚು ಅಪರಾಧ ಹಿನ್ನೆಲೆಯುಳ್ಳ ಸಂಸದರ ಸಂಖ್ಯೆಯಾಗಿದೆ. ಸುಮಾರು 233 ಸಂಸದರು (43%) ತಮ್ಮ ಕ್ರಿಮಿನಲ್ ಹಿನ್ನೆಲೆಯ ಬಗ್ಗೆ ಹೇಳಿಕೊಂಡಿದ್ದಾರೆ. 2014 ರಲ್ಲಿ 185 (34%), 2009 ರಲ್ಲಿ 162 (30%) ಮತ್ತು 2004ರಲ್ಲಿ 125 (23%) ಸಂಸದರು ಕ್ರಿಮಿನಲ್ ಹಿನ್ನಲೆಯನ್ನು ಹೊಂದಿದವರಾಗಿದ್ದಾರೆ. ಸರ್ವೇ ಪ್ರಕಾರ, 2009 ನಂತರ ಕ್ರಿಮಿನಲ್ ಹಿನ್ನೆಲೆಯುಳ್ಳ ಸಂಸದರ ಸಂಖ್ಯೆ ಶೇ.55 ರಷ್ಟು ಏರಿದೆ.
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ 251 ಸಂಸದರ ಪೈಕಿ, 170 (31%) ಸಂಸದರು ಗಂಭೀರ ಅಪರಾಧ ಹಿನ್ನೆಲೆಯನ್ನು ಹೊಂದಿದ್ದು, ಇದರಲ್ಲಿ ಅತ್ಯಾಚಾರ, ಕೊಲೆ, ಕೊಲೆ ಯತ್ನ ಹಾಗೂ ಮಹಿಳೆಯರ ವಿರುದ್ದ ಅಪರಾಧ ಮುಂತಾದವು ಒಳಗೊಂಡಿವೆ.
ಇಂಥ ಪ್ರಕರಣಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. 2019 ರಲ್ಲಿ 159 (29%), 2014ರಲ್ಲಿ 112 (21%), 2009ರಲ್ಲಿ 76 (14%) ಸಂಸದರಿದ್ದರು ಎಂದು ಸರ್ವೇ ತಿಳಿಸಿದೆ. ಈ ಸರ್ವೇಯು ಗೆದ್ದ ಸಂಸದರತ್ತ ಅಪರಾಧ ಹಿನ್ನೆಲೆಯತ್ತ ಗಮನ ನೀಡಿದೆ. 27 ಸಂಸದರ ಅಪರಾಧ ಹಿನ್ನೆಲೆಯವರು, 4 ಮಂದಿ ಐಪಿಸಿ ಸೆಕ್ಷನ್ 302 ರ ಪ್ರಕಾರ, ಹತ್ಯೆ ಸಂಬಂಧಿ ಪ್ರಕರಣದಲ್ಲಿ ಭಾಗಿ ಹಾಗೂ ಐಪಿಸಿ ಸೆಕ್ಷನ್ 307 ರ ಅಡಿಯಲ್ಲಿ 27 ಸಂಸದರ ಕೊಲೆ ಯತ್ನ ಸಂಬಂಧಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ.
ಮಹಿಳೆ ವಿರುದ್ಧ ಅಪರಾಧ ಪ್ರಕರಣದಲ್ಲಿ 15 ಸಂಸದರ ಹೆಸರಿದೆ. ಇದರಲ್ಲಿ ಇಬ್ಬರು ಅತ್ಯಾಚಾರ ಸಂಬಂಧಿ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ. ನಾಲ್ವರು ಅಪಹರಣ ಹಾಗೂ ದ್ವೇಷ ಭಾಷಣ ಪ್ರಕರಣ ಎದುರಿಸು ತ್ತಿದ್ದಾರೆ ಎನ್ನಲಾಗಿದೆ.
ಗೆದ್ದ ಸಂಸದರ ಚುನಾವಣೆ ಗೆಲುವಿನ ಸಾಧ್ಯತೆ 15.3 % ಇದ್ದು, 4.4% ಸಂಸದರು ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲ. ಭಾರತೀಯ ಜನತಾ ಪಕ್ಷ (BharatiyaJanathaParty)ದ 240 ಸಂಸದರ ಪೈಕಿ, 94 (ಶೇ.39) ಮಂದಿ ಅಪರಾಧ ಹಿನ್ನೆಲೆಯವರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಶೇ.49, ಸಮಾಜವಾದಿ ಪಕ್ಷದ 37 ಸಂಸದರು ಅಪರಾಧ ಹಿನ್ನೆಲೆ ಹೊಂದಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷದ 29, ಡಿಎಂಕೆಯ 13, ಟಿಡಿಪಿಯ 8, ಶಿವಸೇನಾ ಪಕ್ಷದ 7 ಮಂದಿ ಹೆಸರಲ್ಲಿ ಪ್ರಕರಣಗಳಿವೆ.