Thursday, 19th September 2024

ಕೇರಳದಲ್ಲಿ 25,010 ಹೊಸ ಕೋವಿಡ್-19 ಪ್ರಕರಣ ದಾಖಲು

covid

ತಿರುವನಂತಪುರಂ: ಶುಕ್ರವಾರ ಕೇರಳದಲ್ಲಿ 25,010 ಹೊಸ ಕೋವಿಡ್-19 ಪ್ರಕರಣಗಳು ಮತ್ತು 177 ಸಾವುಗಳು ವರದಿಯಾಗಿದೆ.

ಈ ಮೂಲಕ ಸೋಂಕಿತರ ಸಂಖ್ಯೆ 43,34,704 ಕ್ಕೆ ಮತ್ತು ಸಾವಿನ ಸಂಖ್ಯೆ 22,303 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 1,51,317 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ತ್ರಿಶೂರ್ ಜಿಲ್ಲೆಯಲ್ಲಿ 3,226 ಹೊಸ ಪ್ರಕರಣಗಳನ್ನು ವರದಿ ಮಾಡಿದೆ. ಎರ್ನಾಕುಲಂ 3034 ಮತ್ತು ಮಲಪ್ಪುರಂ 2606 ಕೇಸ್ ದಾಖಲಿಸಿದೆ. ಸದ್ಯ ಕೇರಳದಲ್ಲಿ 2,37,643 ಸಕ್ರಿಯ ಕೋವಿಡ್-19 ಪ್ರಕರಣಗಳಿದೆ.