Thursday, 3rd October 2024

ಕರೋನಾ ಎರಡನೇ ಅಲೆಗೆ 270 ವೈದ್ಯರು ಬಲಿ: ಐಎಂಎ

ನವದೆಹಲಿ : ಕರೋನಾ ಎರಡನೇ ಅಲೆಯಲ್ಲಿ ದೇಶಾದ್ಯಂತ ಈವರೆಗೆ 270 ವೈದ್ಯರು ಕರೋನಾ ವೈರಸ್ ಸೋಂಕಿಗೆ ಬಲಿಯಾಗಿ ದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ.

ದೇಶದಲ್ಲಿ ಕರೋನಾ ವೈರಸ್ ಮೊದಲ ಅಲೆಯಲ್ಲಿ 748 ವೈದ್ಯರು ವೈರಸ್ ಗೆ ಬಲಿಯಾಗಿದ್ದರೆ, ಎರಡನೇ ಅಲೆಯಲ್ಲಿ, ದೇಶಾ ದ್ಯಂತ 270 ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಐಎಂಎ ಹೇಳಿದೆ.

ದತ್ತಾಂಶವು ಬಿಹಾರ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳು ವೈದ್ಯರಲ್ಲಿ ಬಿಹಾರದಲ್ಲಿ 78 ವೈದ್ಯರು, ಉತ್ತರ ಪ್ರದೇಶದಲ್ಲಿ ಎರಡನೇ ಅಲೆಯಲ್ಲಿ 37 ವೈದ್ಯರು ಮೃತಪಟ್ಟಿದ್ದಾರೆ. ತೀವ್ರವಾಗಿ ಬಾಧಿತವಾದ ದೆಹಲಿಯಲ್ಲಿ ಕೋವಿಡ್-19 ನಿಂದಾಗಿ 28 ವೈದ್ಯರು ಮೃತಪಟ್ಟಿದ್ದಾರೆ.