Sunday, 15th December 2024

ಒಂಬತ್ತು ಸಿಬ್ಬಂದಿ, ಪಾಕಿಸ್ತಾನದ ದೋಣಿ, ₹ 280 ಕೋ. ಮೌಲ್ಯದ ಹೆರಾಯಿನ್ ವಶ

ಅಹಮದಾಬಾದ್ : ರಾಜ್ಯದ ಕರಾವಳಿಯ ಸಮೀಪ ಅರಬ್ಬಿ ಸಮುದ್ರದಲ್ಲಿ ಒಂಬತ್ತು ಸಿಬ್ಬಂದಿಗಳೊಂದಿಗೆ ಪಾಕಿಸ್ತಾನದ ದೋಣಿಯನ್ನು ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು ಬಂಧಿಸಿದೆ.

ಹಡಗಿನಿಂದ ₹ 280 ಕೋಟಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ. ಕೋಸ್ಟ್ ಗಾರ್ಡ್ ಹಡಗುಗಳು ಪಾಕಿಸ್ತಾನದ ಬೋಟ್ ‘ಅಲ್ ಹಜ್’ ಅನ್ನು ಭಾರತದ ಸಮುದ್ರಕ್ಕೆ ನುಗ್ಗಿದಾಗ ಅದನ್ನು ತಡೆಹಿಡಿದು ಬಂಧಿಸಿವೆ.