Thursday, 12th December 2024

ಕಬ್ಬು: ಪ್ರತಿ ಕ್ವಿಂಟಾಲ್‌ಗೆ 290 ರೂ. ಹೆಚ್ಚಳ

ನವದೆಹಲಿ: ಕಬ್ಬಿನ ಬೆಳೆಯ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ 290 ರೂಪಾಯಿಗೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.

ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯ ನಂತರ ಮಾತನಾಡಿದ ಗೋಯಲ್, ಕಬ್ಬಿನ ಎಫ್‌ಆರ್‌ಪಿಯನ್ನು ಪ್ರತಿ ಕ್ವಿಂಟಾಲ್‌ಗೆ 290 ರೂ.ಗೆ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.

2020ರ ಆಗಸ್ಟ್‌ನಲ್ಲಿ ಪ್ರತಿ ಕ್ವಿಂಟಾಲ್‌ಗೆ 5 ರೂ. ಅಂದರೆ 285 ರೂ.ಗೆ ಹೆಚ್ಚಿಸಲಾಗಿತ್ತು. 2019-2020 ರಲ್ಲಿ ನಿಗದಿಪಡಿಸಿದ ಬೆಲೆ ಪ್ರತಿ ಕ್ವಿಂಟಾಲ್‌ಗೆ 105 ರೂ.ಗಳಷ್ಟಿತ್ತು.

ನಮ್ಮ ದೇಶ 70 ಲಕ್ಷ ಟನ್ ಕಬ್ಬು ರಫ್ತು ಮಾಡುವ ಒಪ್ಪಂದ ಮಾಡಿಕೊಂಡಿದೆ, ಅದರಲ್ಲಿ 55 ಲಕ್ಷ ಟನ್ ಈಗಾಗಲೇ ರಫ್ತಾಗಿದೆ ಮತ್ತು ಉಳಿದ 15 ಲಕ್ಷ ಟನ್ ರಫ್ತು ಮಾಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.