Thursday, 12th December 2024

2,927 ಹೊಸ ಕೋವಿಡ್‌ ಪ್ರಕರಣ ಪತ್ತೆ

#corona

ನವದೆಹಲಿ: ದೇಶದಲ್ಲಿ ಬುಧವಾರ ಒಂದೇ ದಿನ 2,927 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. 32 ಮಂದಿ ಮೃತ ಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಬುಧವಾರ ಮೃತಪಟ್ಟವರ ಪೈಕಿ ಕೇರಳದ 26, ಮಹಾರಾಷ್ಟ್ರದ 4 ಮಂದಿ ಸೇರಿದ್ದಾರೆ. ದೆಹಲಿ ಹಾಗೂ ಮಿಜೋರಾಂನಲ್ಲಿ ತಲಾ 1 ಸಾವು ಸಂಭವಿಸಿದೆ. ಇದುವರೆಗಿನ ಕೋವಿಡ್‌ ಪ್ರಕರಣಗಳ ಸಂಖ್ಯೆ 4,30,65,496 ಕ್ಕೆ ತಲುಪಿದೆ. ಈ ಪೈಕಿ ಸಕ್ರಿಯ ಕೋವಿಡ್‌ ಪ್ರಕರಣ ಗಳ ಸಂಖ್ಯೆ 16,279 ಆಗಿದೆ.

ಕೋವಿಡ್‌ ಕಾರಣದಿಂದ ಇದುವರೆಗೆ ಮೃತಪಟ್ಟವರ ಸಂಖ್ಯೆ 5,23,654 ಕ್ಕೆ ತಲುಪಿದೆ.

1. ಮಹಾರಾಷ್ಟ್ರ – 1,47,838
2. ಕೇರಳ – 68,916
3. ಕರ್ನಾಟಕ – 40,057
4. ತಮಿಳುನಾಡು – 38,025
5. ದೆಹಲಿ – 26,169
6. ಉತ್ತರ ಪ್ರದೇಶ – 23,505
7. ಪಶ್ಚಿಮ ಬಂಗಾಳ – 21,201

ಈ ಮೇಲಿನ ರಾಜ್ಯಗಳಲ್ಲಿ ಕೋವಿಡ್‌ ಕಾರಣದಿಂದ ಹೆಚ್ಚು ಸಾವು ಸಂಭವಿಸಿವೆ.