ಉತ್ತರಾಖಂಡ್: ಭಾರೀ ಮೇಘಸ್ಫೋಟದಿಂದ ಸಂಭವಿಸಿದ ಪ್ರವಾಹಕ್ಕೆ ಮನೆ ಕುಸಿದು ಮೂವರು ಮೃತಪಟ್ಟಿದ್ದಾರೆ. ನಾಲ್ವರು ನಾಪತ್ತೆಯಾಗಿರುವ ಘಟನೆ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಮಾಂಡೋ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಉತ್ತರಕಾಶಿಯ ಮಾಂಡೋ ಗ್ರಾಮದಲ್ಲಿ ಸಂಭವಿಸಿದ ಮೇಘಸ್ಫೋಟದ ಘಟನೆ ಕುರಿತು ಎಸ್ ಡಿಆರ್ ಎಫ್ ಇನ್ಸ್ ಪೆಕ್ಟರ್ ಜಗದಾಂಬಾ ಪ್ರಸಾದ್ ತಿಳಿಸಿದ್ದಾರೆ.
ಮೃತರನ್ನು ಮಾಧುರಿ (42ವರ್ಷ), ರೀತು (38ವರ್ಷ) ಹಾಗೂ ಆರು ವರ್ಷದ ಮಗು ಐಶು ಎಂದು ಗುರುತಿಸಲಾಗಿದೆ ಎಂದು ತಿಳಿಸಿದೆ. ಮೇಘಸ್ಫೋಟದಿಂದ ಭಾರೀ ಮಳೆಯಾಗಿದ್ದು, ಮಾಂಡೋ ಗ್ರಾಮದಲ್ಲಿನ ನೂರಾರು ಮನೆಗಳು ಜಲಾವೃತಗೊಂಡಿದೆ.