Thursday, 12th December 2024

ಬಸ್ ಪಲ್ಟಿ: ಚುನಾವಣಾ ಕರ್ತವ್ಯದಲ್ಲಿದ್ದ ಗ್ರಾಮ ರಕ್ಷಕರ ಸಾವು

ನಬರಂಗಪುರ: ಒಡಿಶಾ ರಾಜ್ಯದ ನಬರಂಗಪುರ ಜಿಲ್ಲೆಯಲ್ಲಿ ಬಸ್ ಪಲ್ಟಿಯಾಗಿ ಪಂಚಾಯತ್ ಚುನಾವಣಾ ಕರ್ತವ್ಯದಲ್ಲಿದ್ದ ಮೂವರು ಗ್ರಾಮ ರಕ್ಷಕರು ಮೃತಪಟ್ಟು, 25 ಮಂದಿ ಗಾಯಗೊಂಡಿ ದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ಪಾಪದಹಂಡಿ ಬ್ಲಾಕ್‌ನ ಮೋಕಿಯಾ ಸಮೀಪದ ಸೊರಿಸ್ಪದರ್ ಗ್ರಾಮದಲ್ಲಿ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

ಫೆ.20 ರಂದು ನಡೆಯಲಿರುವ ಮೂರನೇ ಹಂತದ ಮತದಾನದಲ್ಲಿ ನಿಯೋಜನೆಗಾಗಿ 45 ಗ್ರಾಮ ರಕ್ಷಕರು ಅಥವಾ ಗ್ರಾಮ ರಾಖಿಗಳೊಂದಿಗೆ ಬಸ್ ತೆರಳುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.