Saturday, 14th December 2024

ಚಾರ್ ಧಾಮ್ ಯಾತ್ರೆ: ಮೂವರು ಯಾತ್ರಿಕರ ಸಾವು

ಉತ್ತರಾಖಂಡ : ಚಾರ್ ಧಾಮ್ ಯಾತ್ರೆ ಪ್ರಾರಂಭವಾದಾಗಿನಿಂದ ಓರ್ವ ಕಾರ್ಮಿಕ ಸೇರಿದಂತೆ ಐದು ಯಾತ್ರಿಕರು ಹೃದಯಾಘಾತದಿಂದ ಮೃತಪಟ್ಟಿ ದ್ದಾರೆ.

ಯಾತ್ರಾ ಮಾರ್ಗದಲ್ಲಿ ಯಾತ್ರಿಕರಿಗೆ ವೀಲ್ಹ್ ಚೇರ್​ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿದ್ದ ನೇಪಾಳ ಮೂಲದ ಕಾರ್ಮಿಕ ಲಾಲ್ ಬಹದ್ದೂರ್ (45 ) ಎಂಬಾತ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಯಮುನೊತ್ರಿಗೆ ಹೋಗುವಾಗ ವೃದ್ಧ ಯಾತ್ರಿಕರು ಗುರುವಾರ ಹೃದಯಾಘಾತದಿಂದ ಮೃತಪಟ್ಟದ್ದಾರೆ ಎಂದು ಉತ್ತರಕಾಶಿ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ದೇವೇಂದ್ರ ಸಿಂಗ್ ಪಟ್ವಾಲ್ ಮಾಹಿತಿ ನೀಡಿದ್ದಾರೆ.

ಜಂಕಿಚಟ್ಟಿಯಿಂದ ಹಿಮಾಲಯನ್ ದೇವಸ್ಥಾನಕ್ಕೆ ಹೋಗುವ ಕಡಿದಾದ ಮಾರ್ಗದಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿವೆ.