Saturday, 27th July 2024

ತಮಿಳುನಾಡಿನಲ್ಲಿ ಪೆಟ್ರೋಲ್ ಬೆಲೆ ರೂ.3 ಕಡಿತ: ಬಜೆಟ್‌ನಲ್ಲಿ ಘೋಷಣೆ

ಚೆನ್ನೈ: ತಮಿಳುನಾಡಿನಲ್ಲಿ ಪೆಟ್ರೋಲ್ ಬೆಲೆಯನ್ನು ರೂಪಾಯಿ ೩ರಷ್ಟು ಕಡಿತಗೊಳಿಸಲಾಗಿದೆ ಎಂದು ರಾಜ್ಯ ಹಣಕಾಸು ಸಚಿವ ಪಳನಿವೆಲ್ ತ್ಯಾಗರಾಜನ್ ಶುಕ್ರವಾರ ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ.

ಬೆಲೆಯಲ್ಲಿ ಇಳಿಕೆ ಮಾಡುವುದರಿಂದ ರಾಜ್ಯದ ಬೊಕ್ಕಸಕ್ಕೆ ₹1,160 ಕೋಟಿ ಆದಾಯ ನಷ್ಟಉಂಟುಮಾಡುವ ನಿರೀಕ್ಷೆಯಿದೆ. ತಮಿಳುನಾಡಿನಲ್ಲಿ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ ಮಾಡಿರುವ ಆದೇಶ ಆ.14 ರಿಂದ ಜಾರಿಗೆ ಬರಲಿದೆ ಅಂತ ಇದೇ ವೇಳೆ ಹೇಳಿದರು.

ಡಿಎಂಕೆ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 5 ರೂಪಾಯಿ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ 4 ರೂಪಾಯಿಗಳಷ್ಟು ಕಡಿಮೆ ಮಾಡುವುದಾಗಿ ಈ ವರ್ಷದ ಆರಂಭದಲ್ಲಿ ನಡೆದ ರಾಜ್ಯ ಚುನಾವಣೆಯ ಪ್ರಣಾಳಿಕೆ ಯಲ್ಲಿ ಭರವಸೆ ನೀಡಿತ್ತು.

ಅದರಂತೆ ಪೆಟ್ರೋಲ್‌ ಬೆಲೆಯಲ್ಲಿ ರೂ 3 ಇಳಿಕೆ ಮಾಡಿದೆ. ಪೆಟ್ರೋಲ್‌ ಹಾಗೂ ಡಿಸೇಲ್‌ ಬೆಲೆಗೆ ಸಂಬಂಧ ಪಟ್ಟಂತೆ ಮೂಲ ಬೆಲೆಯ ಹೊರತಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮದೇ ಆದ ತೆರಿಗೆಗಳನ್ನು ಸೇರಿಸುತ್ತವೆ. ಇದರಲ್ಲಿ ಹೆಚ್ಚಿನ ಭಾಗವನ್ನು ಕೇಂದ್ರ ಸರ್ಕಾರ ವಿಧಿಸುತ್ತದೆ.

Leave a Reply

Your email address will not be published. Required fields are marked *

error: Content is protected !!