Saturday, 14th December 2024

ಮದ್ರಾಸ್​ ಐಐಟಿಯಲ್ಲಿ 30 ಕರೋನಾ ಪ್ರಕರಣ ಪತ್ತೆ

ಚೆನ್ನೈ: ಮದ್ರಾಸ್​ ಐಐಟಿಯಲ್ಲಿ ಕರೋನಾ ಪ್ರಕರಣ ಮತ್ತಷ್ಟು ಹೆಚ್ಚಳ ವಾಗಿದ್ದು, ಶುಕ್ರವಾರ 30 ಪ್ರಕರಣಗಳು ಪತ್ತೆಯಾಗಿವೆ.

ಗುರುವಾರ 9 ವಿದ್ಯಾರ್ಥಿಗಳಲ್ಲಿ ಕರೊನಾ ದೃಢವಾಗಿತ್ತು. ಇದರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ ಎಂದು ಐಐಟಿ ಆಡಳಿತಾಧಿ ಕಾರಿಗಳು ತಿಳಿಸಿದ್ದಾರೆ.

ಸದ್ಯ ಸೋಂಕು ದೃಢಪಟ್ಟಿರುವ ವಿದ್ಯಾರ್ಥಿಗಳನ್ನು ಐಸೋಲೇಟೆಡ್​ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಮ್ಮು,ನೆಗಡಿ ಹಾಗೂ ಜ್ವರ ಇರುವ ವಿದ್ಯಾರ್ಥಿಗಳನ್ನು ಏಪ್ರಿಲ್​ 19 ರಂದು ಪರೀಕ್ಷೆಗೊಳಪಡಿಸಲಾಗಿತ್ತು.ಈ ಪೈಕಿ 9 ಮಂದಿಗೆ ಸೋಂಕು ದೃಢವಾಗಿತ್ತು.

ಸೋಂಕಿತರ ಸಂಪರ್ಕಕ್ಕೆ ಬಂದ 21 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು. ತಮಿಳುನಾಡಿನಾದ್ಯಂತ ಗುರುವಾರ 39 ಕರೊನಾ ಪ್ರಕರಣಗಳು ಪತ್ತೆಯಾಗಿದ್ದವು.